Tuesday, October 6, 2026

BDA Apartments

immense respect BDA JK_Adv BDA Adv
Home Front Page ಚುನಾವಣೆ ಮುಗಿದ ಮೇಲೆ ‘ಕೈ’ ಟೀಕೆ ಟಿಪ್ಪಣಿಗಳಿಗೆ ಉತ್ತರ ಕೊಡುತ್ತೇನೆ- ಕೇಂದ್ರ ಸಚಿವ ಹೆಚ್ ಡಿಕೆ

ಚುನಾವಣೆ ಮುಗಿದ ಮೇಲೆ ‘ಕೈ’ ಟೀಕೆ ಟಿಪ್ಪಣಿಗಳಿಗೆ ಉತ್ತರ ಕೊಡುತ್ತೇನೆ- ಕೇಂದ್ರ ಸಚಿವ ಹೆಚ್ ಡಿಕೆ

ಚನ್ನಪಟ್ಟಣ,29,2024 (www.justkannada.in): ರಾಜ್ಯ ಉಪಚುನಾವಣೆಯಲ್ಲಿ ಕುತೂಹಲ ಮೂಡಿಸಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಮತ್ತು ಎನ್ ಡಿಎ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಉಂಟಾಗಿದ್ದು ಪರಸ್ಪರ ಆರೋಪ ಪ್ರತ್ಯಾರೋಪಗಳು ನಡೆಯುತ್ತಿವೆ.

ಈ ಕುರಿತು ಮಾತನಾಡಿರುವ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ,  ಕಳೆದ  ಎರಡು ಮೂರು ದಿನಗಳಿಂದ ಚನ್ನ ಪಟ್ಟಣ ಉಪ ಚುನಾವಣೆ ಬಗ್ಗೆ ಚರ್ಚೆಯಾಗುತ್ತಿದೆ. ಉಪ ಚುನಾವಣೆ ರಾಜ್ಯದ ಗಮನ ಸೆಳೆದಿದೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪದ ಪ್ರಯೋಗ ನೋಡಿದ್ದೇನೆ.  ನನ್ನಮೇಲೆ ಹಲವಾರು ವೈಯಕ್ತಿಕ ಆರೋಪ ನೋಡಿದ್ದೇನೆ.  ಅವರ ಟೀಕೆ ಟಿಪ್ಪಣಿಗಳನ್ನ ನೋಟ್ ಮಾಡಿಕೊಂಡಿದ್ದೇನೆ  ಚುನಾವಣಾ ಫಲಿತಾಂಶ ಮುಗಿಯಲಿ ಎಲ್ಲದಕ್ಕೂ ಉತ್ತರ ಕೊಡುತ್ತೇನೆ ಎಂದು ಹೇಳಿದ್ದಾರೆ.

ನನ್ನನ್ನು ಅವರೊಬ್ಬರೇ ಒಕ್ಕಲಿಗರಾ..? ನಾವು ಒಕ್ಕಲಿಗರಲ್ಲವಾ ಎನ್ನುತ್ತಿದ್ದಾರೆ. ಉಪಚುನಾವಣೆ ಮುಗಿಯಲ್ಲಿ ಎಲ್ಲದಕ್ಕೂ ಉತ್ತರ ಕೊಡುತ್ತೇನೆ ಎಂದು ಹೆಚ್ ಡಿಕೆ ಹೇಳಿದ್ದಾರೆ.

Key words: Channapatna, BY-elections, Union Minister, HDK