Sunday, September 20, 2026

BDA Apartments

ಮುಡಾ ತನಿಖೆ ಮತ್ತಷ್ಟು ಚುರುಕು: ಬೆಂಗಳೂರು, ಮೈಸೂರಿನಲ್ಲಿ ಇಡಿ ದಾಳಿ BDA JK_Adv BDA Adv
Home Front Page ಮುಡಾ ತನಿಖೆ ಮತ್ತಷ್ಟು ಚುರುಕು: ಬೆಂಗಳೂರು, ಮೈಸೂರಿನಲ್ಲಿ ಇಡಿ ದಾಳಿ

ಮುಡಾ ತನಿಖೆ ಮತ್ತಷ್ಟು ಚುರುಕು: ಬೆಂಗಳೂರು, ಮೈಸೂರಿನಲ್ಲಿ ಇಡಿ ದಾಳಿ

ಮೈಸೂರು,ಅಕ್ಟೋಬರ್,28,2024 (www.justkannada.in):  ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು,  ಮುಡಾ ಅಧಿಕಾರಿಗಳ ಮನೆ ಮೇಲೆ ಇಡಿ ಅಧಿಕಾರಿಗಳು  ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮೈಸೂರು ಬೆಂಗಳೂರು ಸೇರಿ ಹಲವೆಡೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿನ ಓರ್ವ ಬಿಲ್ಡರ್​ನ​ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇಡಿ ಅಧಿಕಾರಿಗಳು ಬಿಲ್ಡರ್​ನ​ ನಿವಾಸದಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಬೆಂಗಳೂರು, ಮೈಸೂರು ಸೇರಿದಂತೆ 9 ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಲವರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಎನ್ನಲಾಗಿದೆ.

Key words: Muda scam, ED, raids, Bangalore, Mysore