Tuesday, September 1, 2026

BDA Apartments

Home Front Page ‘ಕೈ’ ವಿರುದ್ದ ವಾಗ್ದಾಳಿ: ನಿಖಿಲ್ ನೂರಕ್ಕೆ ನೂರು ಗೆದ್ಧೇ ಗೆಲ್ತಾರೆ ಎಂದ ಮಾಜಿ ಸಚಿವ ಹೆಚ್.ಡಿ...

‘ಕೈ’ ವಿರುದ್ದ ವಾಗ್ದಾಳಿ: ನಿಖಿಲ್ ನೂರಕ್ಕೆ ನೂರು ಗೆದ್ಧೇ ಗೆಲ್ತಾರೆ ಎಂದ ಮಾಜಿ ಸಚಿವ ಹೆಚ್.ಡಿ ರೇವಣ್ಣ

ಬೆಂಗಳೂರು,ಅಕ್ಟೋಬರ್,25,2024 (www.justkannada.in): ಚನ್ನಪಟ್ಟಣ ಕ್ಷೇತ್ರದಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನೂರಕ್ಕೆ ನೂರು ಗೆದ್ದೇ ಗೆಲ್ಲುತ್ತಾರೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್ ಡಿ ರೇವಣ್ಣ, ನಿಖಿಲ್ ಅವರ ತಂದೆಗೆ ಬಲ ಭುಜವಾಗಿ ನಿಂತಿದ್ದಾರೆ. ದೇವೇಗೌಡರ ಕುಟುಂಬ ಮುಗಿದೇ ಹೋಯಿತು ಎನ್ನುತ್ತಿದ್ದರು. ಈಗ ಕುಮಾರಣ್ಣ ಕೇಂದ್ರ ಮಂತ್ರಿ ಆಗಿಲ್ವಾ? ಇಂತಹವೆಲ್ಲ ಎದುರಿಸಿ ರಾಜಕೀಯದಲ್ಲಿ ಇನ್ನೂ ಉಳಿದಿದ್ದೇವೆ ಎಂದು ಕಿಡಿಕಾರಿದರು.

ಕಾಂಗ್ರೆಸ್ಸಿಗರು ಹಾಸನ ಹಿಡಿತ ತೆಗೆದುಕೊಳ್ಳಲು ಮುಂದಾದರು .ಹಾಸನದಲ್ಲಿ ಒಂದು ರಾಷ್ಟ್ರೀಯ ಪಕ್ಷಕ್ಕೆ ನಾಚಿಕೆಯಾಗಬೇಕು. ಎಂಪಿ ಚುನಾವಣೆಯ ಕೊನೆಯ ನಾಲ್ಕು ದಿನ ಏನೇನು ಮಾಡಿದ್ದಾರೆ ಅಂತಾ ಗೊತ್ತಿದೆ. ಮುಂದೆ  ಸಮಯ ಬಂದಾಗ ಹೇಳುತ್ತೇನೆ. ನನಗೆ ದೇವರ ಮೇಲೆ ನಂಬಿಕೆ ಇದೆ, ಕಾಲ ಬರುತ್ತದೆ ಎಂದರು.

ಅಧಿಕಾರಕ್ಕೆ ಅಂಟಿಕೊಂಡ ಕುಟುಂಬ ನಮ್ಮದಲ್ಲ ಚನ್ನಪಟ್ಟಣ ಅಭ್ಯರ್ಥಿ ಬಗ್ಗೆ ನೀವೇ ನಿರ್ಧರಿಸಿ ಅಂದರು ಕೇಂದ್ರದ ಬಿಜೆಪಿಯವರೇ ಜೆಡಿಎಸ್ ನವರು ಸ್ಪರ್ಧಿಸಲಿ ಅಂದರು. ನಿಖಿಲ್ ರನ್ನು ಚುನಾವಣೆಗೆ ನಿಲ್ಲಿಸುವ ಉದ್ದೇಶ ಇರಲಿಲ್ಲ. ನಿಖಿಲ್ ರನ್ನು ಅಭ್ಯರ್ಥಿ ಮಾಡಲು ಜೆಪಿ ನಡ್ಡಾ ಹೇಳಿದ್ದರು ಎಂದು ಹೆಚ್ ಡಿ ರೇವಣ್ಣ ತಿಳಿಸಿದರು.

Key words: Former minister, HD Revanna , Nikhil  kumaraswamy, Channapatna