Sunday, August 9, 2026

BDA Apartments

Home Crime ಅಪರಿಚಿತ ವಾಹನ ಡಿಕ್ಕಿ: ಖಾಸಗಿ ಸಂಸ್ಥೆ ಕೃಷಿ ಅಧಿಕಾರಿ ಸ್ಥಳದಲ್ಲೇ ಸಾವು

ಅಪರಿಚಿತ ವಾಹನ ಡಿಕ್ಕಿ: ಖಾಸಗಿ ಸಂಸ್ಥೆ ಕೃಷಿ ಅಧಿಕಾರಿ ಸ್ಥಳದಲ್ಲೇ ಸಾವು

ಮೈಸೂರು,ಅಕ್ಟೋಬರ್,24,2024 (www.justkannada.in): ಅಪರಿಚಿತ ವಾಹನ ಡಿಕ್ಕಿಯಾಗಿ ಖಾಸಗಿ ಸಂಸ್ಥೆ ಕೃಷಿ ಅಧಿಕಾರಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ನಡೆದಿದೆ.

ನಂಜನಗೂಡಿನ ಹುಸ್ಕೂರು ಗ್ರಾಮದ ಬಳಿ ಈ ಘಟನೆ ನಡೆದಿದೆ. ಖಾಸಗಿ ಸಂಸ್ಥೆಯಲ್ಲಿ ಕೃಷಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಸುನಿಲ್(24) ಮೃತ ಪಟ್ಟ ಯುವಕ.  ಹಗಿನವಾಳು ಗ್ರಾಮದ ಬಳಿ ತನ್ನ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಮಾರ್ಗಮಧ್ಯೆ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದು ಪರಾರಿಯಾಗಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಸುನಿಲ್ ಸುಮಾರು 20 ಅಡಿ ದೂರ ಹಾರಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ಥಳಕ್ಕೆ ನಂಜನಗೂಡು ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು,  ಹಿಟ್ & ರನ್ ಕೇಸ್ ದಾಖಲಿಸಿಕೊಂಡಿದ್ದಾರೆ.

Key words: mysore, accident, agriculture officer, dies