Sunday, August 2, 2026

BDA Apartments

Home Front Page ಸಿಪಿವೈ ಕಾಂಗ್ರೆಸ್ ಸೇರ್ಪಡೆ ಪಕ್ಷ ಸಂಘಟನೆ ಮೇಲೆ ಪರಿಣಾಮ ಬೀರಲ್ಲ- ಬಿವೈ ವಿಜಯೇಂದ್ರ

ಸಿಪಿವೈ ಕಾಂಗ್ರೆಸ್ ಸೇರ್ಪಡೆ ಪಕ್ಷ ಸಂಘಟನೆ ಮೇಲೆ ಪರಿಣಾಮ ಬೀರಲ್ಲ- ಬಿವೈ ವಿಜಯೇಂದ್ರ

ಬೆಂಗಳೂರು,ಅಕ್ಟೋಬರ್,23,2024 (www.justkannada.in):  ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಿಂದ ಪಕ್ಷ ಸಂಘಟನೆ ಮೇಲೆ ಪರಿಣಾಮ ಬೀರಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ,  ನಮ್ಮ ಗುರಿ ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಮಾಡುವುದು.  ನಾವು ಸಿಪಿ ಯೋಗೇಶ್ವರ್ ಮೇಲೆ ಅವಲಂಬಿತರಾಗಿರಲಿಲ್ಲ.  ಕಾರ್ಯಕರ್ತರ ಪಡೆ ನಮಗೆ ಅಲ್ಲಿದೆ. ಪಕ್ಷ ಗಟ್ಟಿಗೊಳಿಸುತ್ತೇವೆ. ಯೋಗೇಶ್ವರ್ ಸಾಕಷ್ಟು ವಿಚಾರ ಹೇಳಬಹುದು, ಹೇಳಲಿ.  ಎಲ್ಲವನ್ನೂ ಕಾಲವೇ ತೀರ್ಮಾನಿಸುತ್ತದೆ ಎಂದು ತಿಳಿಸಿದರು.

ರಿಯಲ್ ಎಸ್ಟೇಟ್ ದಂಧೆಯಲ್ಲಿ ಸರ್ಕಾರ ಬ್ಯೂಸಿ

ಹಾಗೆಯೇ ಸರ್ಕಾರದ ವಿರುದ್ದವೂ ಗುಡುಗಿದ ಬಿವೈ ವಿಜಯೇಂದ್ರ,  ರಾಜ್ಯ ಸರ್ಕಾರ ರಾಜ್ಯದ ಜನರ ಸಮಸ್ಯೆ ಬಗೆಹರಿಸುತ್ತಿಲ್ಲ. ರಿಯಲ್ ಎಸ್ಟೇಟ್ ದಂಧೆಯಲ್ಲಿ ಸರ್ಕಾರ ಬ್ಯೂಸಿಯಾಗಿದೆ.  ಸರ್ಕಾರ ಇದ್ದೂ ಇಲ್ಲದಂತಿದೆ. ರೈತರ ಸಂಕಷ್ಟಕ್ಕೆ ಇವರು ಸ್ಪಂದಿಸುವ ಕೆಲಸ ಮಾಡಿತ್ತಿಲ್ಲ. ಬೆಂಗಳೂರು ಸಿಂಗಾಪುರ ಮಾಡುತ್ತೀವಿ ಅಂದ ಸಚಿವರೆಲ್ಲಿ..?  ಭ್ರಷ್ಟಾಚಾರಿದಿಂದಲೂ ಹೊರಗೆ ಬರ್ತಿಲ್ಲ ಇವರಿಗೆ ಬೆಂಗಳೂರು ಅಭಿವೃದ್ಧಿ ಬೇಕಾಗಿಲ್ಲ. ಸರ್ಕಾರ ಇದ್ದೂ ಇಲ್ಲದಂತಿದೆ ಎಂದು ವಾಗ್ದಾಳಿ ನಡೆಸಿದರು.

Key words: CP Yogeshwar, Congress, not affect, BJP, BY Vijayendra