Saturday, October 24, 2026

Dasara Wishes

Minister S.T. Somashekar releases Yuva Dasara posters DasraWishes_JK DasraWishes JK
Happy Dasara
Home Cinema ಅಜ್ಜಿ ನಿಧನದ ವೇಳೆ “ರೀಲ್ಸ್‌ “ ಗಾಗಿ ಅಮಾನವೀಯ ವರ್ತನೆ: ಸುದೀಪ್‌ ಪುತ್ರಿಯ ಅಸಮಧಾನ.

ಅಜ್ಜಿ ನಿಧನದ ವೇಳೆ “ರೀಲ್ಸ್‌ “ ಗಾಗಿ ಅಮಾನವೀಯ ವರ್ತನೆ: ಸುದೀಪ್‌ ಪುತ್ರಿಯ ಅಸಮಧಾನ.

Sanvi Sudeep, called out ‘inhumane’ people on her Instagram

 

ಬೆಂಗಳೂರು, ಅ.21,2024: (www.justkannada.in news) ಬ್ಲಾಗರ್ಸ್‌, ಯೂ ಟ್ಯೂಬರಸ್‌ ಗಳ ಹಾವಳಿಗೆ ನಟ ಕಿಚ್ಚ ಸುದೀಪ್‌ ಮಗಳು ಸಾನ್ವಿ ತೀವ್ರ ಅಸಮಧಾನ ವ್ಯಕ್ತಪಡಿಸಿ ಮಾಡಿರುವ ಪೋಸ್ಟ್‌ ಚಿಂತನೆಗೀಡು ಮಾಡಿದೆ.

ನಟ ಸುದೀಪ್‌ ಅವರ ತಾಯಿ ಸರೋಜಮ್ಮ ಅವರು ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಭಾನುವಾರ ಬೆಳಗ್ಗೆ ಮೃತಪಟ್ಟರು. ಈ ಸುದ್ಧಿ ಮಾಧ್ಯಮಗಳಲ್ಲಿ ಬಿತ್ತರಗೊಂಡ ಕೂಡಲೇ ಜೆ.ಪಿ.ನಗರದ ಸುದೀಪ್‌ ನಿವಾಸದ ಬಳಿ ಜನಜಂಗುಳಿ. ಜತೆಗೆ ಬ್ಲಾಗರ್ಸ್‌ ಹಾಗೂ ಯೂ ಟ್ಯೂಬರ್ಸ್‌ ಗಳು ಜಮಾಯಿಸಿ ವಾತಾವರಣವನ್ನೇ ಹಾಳು ಗೆಡವಿದರು.

ತಮ್ಮ ಮೊಬೈಲ್‌ ಕ್ಯಾಮೆರಾದಲ್ಲಿ ಸುದೀಪ್‌ ಹಾಗೂ ಕುಟುಂಬದವರನ್ನು ಸೆರೆ ಹಿಡಿಯಲು ಅಸಹ್ಯಕರ ಪೈಪೋಟಿ ನಡೆಸಿದರು. ಇದನ್ನು ಮಾಧ್ಯಮಗಳಲ್ಲಿ ಕಂಡ ಜನರಿಗೆ ಇವರ ವರ್ತನೆ ರೇಜಿಗೆ ಹುಟ್ಟಿಸಿತ್ತು ಅಂದ ಮೇಲೆ ಕುಟುಂಬದ ಕುಡಿ, ಕಿಚ್ಚನ ಮಗಳಿಗೆ ಹೇಗಾಗಿರಬೇಡಾ…?

ಈ ಬಗ್ಗೆ ಪೋಸ್ಟ್‌ ಹಾಕಿರುವ ಕಿಚ್ಚನ ಪುತ್ರಿ ಸಾನ್ವಿ,  ಇಂದು ನನ್ನ ಕುಟುಂಬಕ್ಕೆ ತುಂಬಾ ಕಷ್ಟದ ದಿನವಾಗಿತ್ತು, ಆದರೆ ನನ್ನ ಅಜ್ಜಿಯನ್ನು ಕಳೆದುಕೊಳ್ಳುವುದು ಕೆಟ್ಟ ಭಾಗವಾಗಿರಲಿಲ್ಲ. ನನ್ನ ಮನೆಯ ಹೊರಗೆ ಜಮಾಯಿಸಿದ ಜನರು, ಜೋರಾಗಿ ಹರ್ಷೋದ್ಗಾರ ಮಾಡಿದ್ದು, ನಾನು ದುಃಖಿಸಲು ಪ್ರಯತ್ನಿಸುತ್ತಿರುವಾಗ ನನ್ನ ಮುಖಕ್ಕೆ ಕ್ಯಾಮೆರಾಗಳನ್ನು ಹಿಡಿದದ್ದು,  ಒಬ್ಬ ವ್ಯಕ್ತಿ ಇಷ್ಟರ ಮಟ್ಟಿಗೂ ಅಮಾನವೀಯನಾಗಿರಬಹುದೆಂದು ನನಗೆ ತಿಳಿದಿರಲ್ಲ.

ಅಜ್ಜಿ ನಿಧನದ ವೇಳೆ “ರೀಲ್ಸ್‌ “ ಗಾಗಿ ಅಮಾನವೀಯ ವರ್ತನೆ sudeep

ನನ್ನ ತಂದೆ ತನ್ನ ತಾಯಿಗಾಗಿ ಅಳುತ್ತಿದ್ದಾಗ, ಜನರು ತಳ್ಳುತ್ತಿದ್ದರು ಮತ್ತು ಎಳೆಯುತ್ತಿದ್ದರು. ನನ್ನಜ್ಜಿಗೆ  ಅರ್ಹವಾದ ಬಿಳ್ಕೊಡುಗೆ ನೀಡಲು ನಾವು  ಪರದಾಡುವಂತಾಗಿ ತುಂಬಾ ತೊಂದರೆ ಅನುಭವಿಸಿದ್ದೇವೆ. ನಾನು ಪ್ರೀತಿಪಾತ್ರರನ್ನು ಕಳೆದುಕೊಂಡ ಬಗ್ಗೆ ಅಳುತ್ತಿದ್ದರೆ, ಈ ಜನರು ರೀಲ್ಸ್‌ ಬಗ್ಗೆ  ಕಾಳಜಿವಹಿಸುತ್ತಿದ್ದ ಪರಿ ಬೇಸರ ಮೂಡಿಸಿತು.

key words: Sanvi Sudeep, called out, ‘inhumane’ people, on her Instagram