Sunday, August 23, 2026

BDA Apartments

Home Cinema ನಟ ದರ್ಶ‍ನ್ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

ನಟ ದರ್ಶ‍ನ್ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

ಬೆಂಗಳೂರು, ಅಕ್ಟೋಬರ್,8, 2024 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆಯನ್ನು ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯ ನಾಳೆಗೆ ಮುಂದೂಡಿಕೆ ಮಾಡಿದೆ.

ಇಂದು ಕೋರ್ಟ್ ನಲ್ಲಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ನಟ ದರ್ಶನ್ ಪರ ವಕೀಲ ಸಿ.ವಿ ನಾಗೇಶ್ ಈಗಾಗಲೇ  ವಾದ ಮಂಡಿಸಿದ್ದು ಇಂದು ಎಸ್ ಪಿಪಿ ಪ್ರಸನ್ನ ಕುಮಾರ್ ವಾದಿಸಿದರು.  ನಟ ದರ್ಶನ್ ರೇಣುಕಾಸ್ವಾಮಿ ಮರ್ಮಾಂಗಕ್ಕೆ ಒದ್ದಿದ್ದಾನೆ.  ದರ್ಶನ್ ಶೂನಲ್ಲಿ ರಕ್ತದ ಕಲೆಗಳು ಇವೆ.  ಸಾವಿನ ಸಮಯದ ಬಗ್ಗೆಯೂ ಪೋಸ್ಟ್ ಮಾರ್ಟಮ್ ಇದೆ. ಊಟ ಮಾಡಿದ 2 ಗಂಟೆ ಬಳಿಕ ಸಾವು ಸಂಭವಿಸಿದೆ ವೈದರು ನೀಡಿದ ಪೋಸ್ಟ್ ಮಾರ್ಟಮ್ ನಲ್ಲಿ ಈ ವಿಷಯವಿದೆ.  ರೇಣುಕಾಸ್ವಾಮಿ ಎದೆ ಗೂಡಿನಲ್ಲಿ 17 ಗಾಯಗಳಾಗಿವೆ. ಇದು ದರ್ಶಣ್ ರಕ್ತ ಚರಿತ್ರೆ ತೋರಿಸುತ್ತದೆ ಎಂದರು.

ಬಳಿಕ ಎಸ್ ಪಿಪಿ ಪ್ರಸನ್ನ ಕುಮಾರ್ ಮನವಿ ಮೇರೆಗೆ ನ್ಯಾಯಾಲಯ ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆ ಮಧ್ಯಾಹ್ನ 12.30ಕ್ಕೆ ಮುಂದೂಡಿಕೆ ಮಾಡಿದೆ.

Key words: Actor, Darshan, bail application, hearing, adjourned