Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home DASARA2024 ದಸರಾ ಗಜಪಡೆಗೆ ಅಂತಿಮ ಹಂತದ ತೂಕ ಪರೀಕ್ಷೆ: ಕ್ಯಾಪ್ಟನ್ ಅಭಿಮನ್ಯುಗೆ ಅಗ್ರಸ್ಥಾನ

ದಸರಾ ಗಜಪಡೆಗೆ ಅಂತಿಮ ಹಂತದ ತೂಕ ಪರೀಕ್ಷೆ: ಕ್ಯಾಪ್ಟನ್ ಅಭಿಮನ್ಯುಗೆ ಅಗ್ರಸ್ಥಾನ

ಮೈಸೂರು,ಅಕ್ಟೋಬರ್,7,2024 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಪ್ರಮುಖ ಆಕರ್ಷಣೆ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಆಗಮಿಸಿ ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಗಜಪಡೆ ಆನೆಗಳಿಗೆ ಇಂದು ಅಂತಿಮ ಹಂತದ ತೂಕ ಪರೀಕ್ಷೆ ನಡೆಸಲಾಯಿತು.

ನಗರದ ಸಾಯಿರಾಂ ತೂಕ ಪರೀಕ್ಷಾ ಕೇಂದ್ರದಲ್ಲಿದಸರಾ ಗಜಪಡೆಯ 14 ಆನೆಗಳ  ಅಂತಿಮ ಹಂತದ ತೂಕ ಪರೀಕ್ಷೆ ನಡೆಸಲಾಯಿತು. ತೂಕದಲ್ಲಿ ಕ್ಯಾಪ್ಟನ್ ಅಭಿಮನ್ಯು ಅಗ್ರ‍ಸ್ಥಾನ ಪಡೆದಿದ್ದು, ಈ ಬಾರಿ 5820 ಕೆಜಿ ತೂಕ ಹೊಂದಿದ್ದಾನೆ, ಕಳೆದ ಬಾರಿ ಅಭಿಮನ್ಯು 5560 ಕೆಜಿ ತೂಕ ಹೊಂದಿದ್ದನು. ಒಂದು ತಿಂಗಳ ಅಂತರದಲ್ಲಿ ಕ್ಯಾಪ್ಟನ್ ಅಭಿಮನ್ಯು 260 ಕೆಜಿ ಹೆಚ್ಚಿಸಿಕೊಂಡಿದ್ದಾನೆ.

ತೂಕ ಪರೀಕ್ಷೆಯಲ್ಲಿ ಭಾಗಿಯಾದ14 ಆನೆಗಳ ತೂಕ ಈ ಕೆಳಕಂಡಂತಿದೆ.

ಅಭಿಮನ್ಯು     : 5820 ಕೆಜಿ

ಲಕ್ಷ್ಮಿ               :2625 ಕೆಜಿ

ಭೀಮ             :5380 ಕೆಜಿ

ಏಕಲವ್ಯ          :5095 ಕೆಜಿ

ರೋಹಿತ          :3930 ಕೆಜಿ

ದೊಡ್ಡ ಹರವೆ ಲಕ್ಷ್ಮಿ :3570 ಕೆಜಿ

ಕಂಜನ್            :4725 ಕೆಜಿ

ಪ್ರಶಾಂತ           :5240 ಕೆಜಿ

ಸುಗ್ರೀವ            :5540 ಕೆಜಿ

ಗೋಪಿ              :5280 ಕೆಜಿ

ವರಲಕ್ಷ್ಮಿ            :3555 ಕೆಜಿ

ಮಹೇಂದ್ರ          5150 ಕೆಜಿ

ಹಿರಣ್ಯ.      ‌       3160 ಕೆಜಿ

ಧನಂಜಯ.        5255  ಕೆಜಿ

ಈ ಕುರಿತು ಮಾತನಾಡಿದ ಡಿಸಿಎಫ್ ಡಾ ಪ್ರಭುಗೌಡ, 14 ಆನೆಗಳಿಗೆ ಇಂದು ತೂಕ ಪರೀಕ್ಷೆ ನಡೆಸಲಾಗಿದೆ. ಎಲ್ಲಾ ಆನೆಗಳು ತೂಕವನ್ನ ಹೆಚ್ಚಳ ಮಾಡಿಕೊಳ್ಳಲಾಗಿದೆ. ಭೀಮ ಎಲ್ಲಾ ಆನೆಗಳಿಗಿಂತ ತೂಕವನ್ನ ಹೆಚ್ಚಿಸಿಕೊಂಡಿದ್ದಾನೆ. ಅಭಿಮನ್ಯು ತೂಕದಲ್ಲಿ ಮೊದಲ ಸ್ಥಾನ ಪಡೆದಿದ್ದಾನೆ. ಆನೆಗಳ ಆರೋಗ್ಯ ಕೂಡ ಉತ್ತಮವಾಗಿದೆ. ಜಂಬೂಸವಾರಿಯಲ್ಲಿ ಭಾಗಿಯಾಗಲಿಕ್ಕೆ ಎಲ್ಲಾ ಆನೆಗಳು ಸಿದ್ದಗೊಂಡಿವೆ ಎಂದು ತಿಳಿಸಿದರು.

ದಸರಾ ಗಜಪಡೆಗೆ ಅಂತಿಮ ಹಂತದ ತೂಕ ಪರೀಕ್ಷೆ: ಕ್ಯಾಪ್ಟನ್ ಅಭಿಮನ್ಯುಗೆ ಅಗ್ರಸ್ಥ...

Key words: mysore Dasara,  Gajapade, Weight Test