Sunday, September 20, 2026

BDA Apartments

ಸೈಟ್ ವಾಪಸ್ ನೀಡಿದ್ದು ಒಳ್ಳೆಯ ಕೆಲಸ: ಉಳಿದ ರಾಜಕಾರಣಿಗಳೂ ಹೀಗೆ ಮಾಡಲಿ- ಪಿ.ಎಸ...
Home Front Page ಸೈಟ್ ವಾಪಸ್ ನೀಡಿದ್ದು ಒಳ್ಳೆಯ ಕೆಲಸ: ಉಳಿದ ರಾಜಕಾರಣಿಗಳೂ ಹೀಗೆ ಮಾಡಲಿ- ಪಿ.ಎಸ್.ನಟರಾಜ್

ಸೈಟ್ ವಾಪಸ್ ನೀಡಿದ್ದು ಒಳ್ಳೆಯ ಕೆಲಸ: ಉಳಿದ ರಾಜಕಾರಣಿಗಳೂ ಹೀಗೆ ಮಾಡಲಿ- ಪಿ.ಎಸ್.ನಟರಾಜ್

ಮೈಸೂರು,ಅಕ್ಟೋಬರ್,1,2024 (www.justkannada.in): ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಸೈಟ್ ವಾಪಸ್ಸು ನೀಡಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅದರಂತೆ ಉಳಿದ ರಾಜಕಾರಣಿಗಳು ಸೈಟ್ ವಾಪಸ್ ನೀಡಲಿ ಎಂದು ಮುಡಾದ ಮಾಜಿ ಉದ್ಯೋಗಿ, ಹೋರಾಟಗಾರ ಪಿ.ಎಸ್.ನಟರಾಜ್ ಆಗ್ರಹಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಪಿ.ಎಸ್.ನಟರಾಜ್, ಸಿಎಂ ಪತ್ನಿ ಸದ್ಯ ಈಗಲಾದರೂ ಸೈಟ್  ವಾಪಸ್ಸು ಮಾಡಿ‌ ಒಳ್ಳೆ ಕೆಲಸ ಮಾಡಿದ್ದಾರೆ. ಅವರಿಗೆ ದೇವರು ಒಳ್ಳೆಯದನ್ನ ಮಾಡಲಿ. ಒಳ್ಳೆ ಸಾತ್ಸಾಂಗಕ್ಕೆ‌‌ ನಾಂದಿ‌ ಹಾಡಿದ್ದಾರೆ. ಅದರಂತೆ ಉಳಿದ ರಾಜಕಾರಣಿಗಳು ಸೈಟ್ ವಾಪಸ್ ನೀಡಲಿ. ಉಳಿದವರು ಗೌರವ ಘನತೆ ಉಳಿಸಿಕೊಳ್ಳುವ ಕೆಲಸ ಮಾಡಲಿ. ಮನೆಯ ಗೃಹಿಣಿ ಮನೆಯೊಡೆಯನಿಗಿಂತ ಉತ್ತಮ ಆಯ್ಕೆ ತೆಗೆದುಕೊಳ್ಳುತ್ತಾರೆ.  ಸೈಟ್ ವಾಪಸ್ಸು ನೀಡಿರುವುದರಿಂದ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು

ಮುಡಾದ ಹಣವನ್ನ ವರುಣಾ, ಶ್ರೀರಂಗಪಟ್ಟಣಕ್ಕೆ ಬಿಡುಗಡೆ ಮಾಡಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ನಟರಾಜ್, ರಾಜ್ಯಪಾಲರಿಗೆ ಈ ಕುರಿತು ಪತ್ರ ಬರೆದಿದ್ದೆ. ಸದ್ಯ ಮುಡಾ ಪ್ರಕರಣದಲ್ಲಿ ಇಡಿ ಎಂಟ್ರಿಯಾಗಿದೆ. ಅದಕ್ಕಾಗಿ ನಾನು ಇಡಿ ಅವರಿಗೂ ಮಾಹಿತಿ‌ ನೀಡುತ್ತೇನೆ ಎಂದು ತಿಳಿಸಿದರು.

ಸೈಟ್ ವಾಪಸ್ ನೀಡಿದ್ದು ಒಳ್ಳೆಯ ಕೆಲಸ VTU TOP BANNER 04

Key words: CM Siddaramaiah wife, muda, site, returned, P. S. Nataraj