Thursday, September 10, 2026

BDA Apartments

Home Front Page ನ್ಯಾಯಾಲಯದ ತೀರ್ಪಿನ ಬಗ್ಗೆ ಮಾತನಾಡುವುದು ಸೂಕ್ತ ಅಲ್ಲ- ಸಚಿವ ಹೆಚ್.ಕೆ ಪಾಟೀಲ್

ನ್ಯಾಯಾಲಯದ ತೀರ್ಪಿನ ಬಗ್ಗೆ ಮಾತನಾಡುವುದು ಸೂಕ್ತ ಅಲ್ಲ- ಸಚಿವ ಹೆಚ್.ಕೆ ಪಾಟೀಲ್

ಬೆಂಗಳೂರು,ಸೆಪ್ಟಂಬರ್, 24,2024 (www.justkannada.in): ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ಕುರಿತು ಇಂದು ಹೈಕೋರ್ಟ್ ತೀರ್ಪು ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿರುವ ಕಾನೂನು ಸಚಿವ ಹೆಚ್.ಕೆ ಪಾಟೀಲ್, ನ್ಯಾಯಾಲಯದ ತೀರ್ಪಿನ ಬಗ್ಗೆ ಮಾತನಾಡುವುದು ಸೂಕ್ತ ಅಲ್ಲ ಎಂದಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಹೆಚ್.ಕೆ ಪಾಟೀಲ್, ಸಿಎಂ ಕಡತಗಳಿಗೆಸಹಿ ಮಾಡಿಲ್ಲ ಅವಸರದಲ್ಲಿ ರಾಜ್ಯಪಾಲರ ನಿರ್ಣಯ ಆಗಿದೆ. ಎರಡೂ ಕಡೆಯಿಂದಲೂ ನ್ಯಾಯಮೂರ್ತಿಗಳು ವಾದ ಆಲಿಸಿದ್ದಾರೆ.  ನ್ಯಾಯಾಲಯದ ತೀರ್ಪಿನ ಬಗ್ಗೆ ಮಾತನಾಡುವುದು ಸೂಕ್ತವಲ್ಲ ಸಿಎಂ ಪರಿಸ್ಥಿತಿ ಎಷ್ಟು ಗಟ್ಟಿಯಾಗಿ ಎದುರಿಸಿದ್ದಾರೆ ಎಂದು ಗೊತ್ತಿದೆ ಎಂದರು

ಕೋರ್ಟ್ ತೀರ್ಪು ಬರುವವರೆಗೂ ಏನು ಮಾತನಾಡಲ್ಲ. ಕಾಂಗ್ರೆಸ್ ಪಕ್ಷ ಶತಮಾನ ಕಂಡಿರುವ ಪಕ್ಷ ಇಂತಹ ಅನೇಕ ಸಂದರ್ಭಗಳನ್ನ ಕಂಡಿದ್ದೇವೆ. ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಹೆಚ್.ಕೆ ಪಾಟೀಲ್ ತಿಳಿಸಿದರು.

Key words: muda scam, court, verdict, Minister, HK Patil