Tuesday, September 22, 2026

BDA Apartments

Home Front Page ಗುತ್ತಿಗೆದಾರ ಚಲುವರಾಜು ಕುಟುಂಬಕ್ಕೆ ಸರ್ಕಾರದಿಂದ ಭದ್ರತೆ- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಗುತ್ತಿಗೆದಾರ ಚಲುವರಾಜು ಕುಟುಂಬಕ್ಕೆ ಸರ್ಕಾರದಿಂದ ಭದ್ರತೆ- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು,ಸೆಪ್ಟಂಬರ್,16,2024 (www.justkannada.in):  ಶಾಸಕ ಮುನಿರತ್ನ ವಿರುದ್ದ ಜಾತಿ ನಿಂದನೆ ಪ್ರಕರಣ ಸಂಬಂಧ ಗುತ್ತಿಗೆದಾರ ಚಲುವರಾಜು ಕುಟುಂಬಕ್ಕೆ ಸರ್ಕಾರದಿಂದ ಭದ್ರತೆ ನೀಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

ಇಂದು ಭಾರತ್ ನಗರದಲ್ಲಿರುವ ಗುತ್ತಿಗೆದಾರ ಚಲುವರಾಜು ನಿವಾಸಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿದರು. ಈ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಳಿ ನನ್ನ ಪತಿ ಮತ್ತ ನಮ್ಮ ಮನೆಗೆ ಭದ್ರತೆ ಕೊಡಿ ಎಂದು ಚಲುವರಾಜು  ಪತ್ನಿ ಮನವಿ ಮಾಡಿದರು.

ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮುನಿರತ್ನರ ಇಂತಹ ಹೇಳಿಕೆ ಶೋಭೆ ತರಲ್ಲ. ಜಾತಿ ನಿಂದನೆ ಮಾಡೋದು ಸರಿಯಲ್ಲ.  ಚಲುವರಾಜು ಕುಟಂಬದ ಜೊತೆ ಸರ್ಕಾರ ಇದೆ ಚಲುವರಾಜು ಕುಟುಂಬಕ್ಕೆ ಭದ್ರತೆ ವಹಿಸಲಾಗುತ್ತದೆ ಎಂದರು

ಎಫ್ ಎಸ್ ಎಲ್ ನಿಂದ ವರದಿ ಬರಲಿ ನಿಷ್ಪಕ್ಷಪಾತ ತನಿಖೆ ಮಾಡುತ್ತೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

Key words: contractor, Chaluvaraju, family,  Minister, Lakshmi Hebbalkar