Thursday, August 13, 2026

BDA Apartments

Home Front Page ನಾನು ಸಿಎಂ ಹುದ್ದೆ ಆಕಾಂಕ್ಷಿ ಎಂದಿದ್ದ ಮಾಜಿ ಸಚಿವ ಆರ್.ವಿ ದೇಶಪಾಂಡೆ ‘ಯುಟರ್ನ್’

ನಾನು ಸಿಎಂ ಹುದ್ದೆ ಆಕಾಂಕ್ಷಿ ಎಂದಿದ್ದ ಮಾಜಿ ಸಚಿವ ಆರ್.ವಿ ದೇಶಪಾಂಡೆ ‘ಯುಟರ್ನ್’

ಬೆಳಗಾವಿ,ಸೆಪ್ಟಂಬರ್,10,2024 (www.justkannada.in):  ಸಿದ್ದರಾಮಯ್ಯ ಅನುಮತಿ ಕೊಟ್ಟರೇ ನಾನು ಸಿಎಂ ಆಗುತ್ತೇನೆ ಎಂದು ಹೇಳಿಕೆ ನೀಡಿದ್ದ ಶಾಸಕ ಹಾಗೂ ಮಾಜಿ ಸಚಿವ ಆರ್.ವಿ ದೇಶಪಾಂಡೆ ಇದೀಗ ಯುಟರ್ನ್ ಹೊಡೆದಿದ್ದಾರೆ.

ನಾನು ನಾನು ಸಿಎಂ ಹುದ್ದೆ ಆಕಾಂಕ್ಷಿಅಲ್ಲವೇ ಅಲ್ಲ. ನಮ್ಮ ಸರ್ಕಾರ ಇರುವವರೆಗೂ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ ಎಂದಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ವಿ ದೇಶಪಾಂಡೆ, ಸಿಎಂ ಕುರ್ಚಿ ಖಾಲಿ ಇದ್ದಾಗ ಯೋಚಿಸಬೇಕು . ಸಿಎಂ ಕುರ್ಚಿ ಖಾಲಿ ಇಲ್ಲ ನಮ್ಮ ಸರ್ಕಾರ ಇರುವವರೆಗೂ ಸಿದ್ದರಾಮಯ್ಯ ಸಿಎಂ.  ನಾನು ಸಿಎಂ ಆಕಾಂಕ್ಷಿ ಅಲ್ಲವೇ ಅಲ್ಲ.  ಸಿದ್ದರಾಮಯ್ಯ 5 ವರ್ಷ ಸಂಪೂರ್ಣ ಅಧಿಕಾರ ನಡೆಸುತ್ತಾರೆ. ಸಿಎಂ ಬದಲಾವಣೆ ಬಗ್ಗೆ ಮಾತನಾಡೋದು ತಪ್ಪಾಗುತ್ತೆ.  ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ಯೋಚಿಸಿಲ್ಲ  ಎಂದರು.

ಮುಡಾ ಹಗರಣ ಸಂಬಂಧ ಪ್ರತಿಕ್ರಿಯಿಸಿದ ಆರ್.ವಿ ದೇಶಪಾಂಡೆ, ಮುಡಾದಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ.  ಸಿಎಂ ಆಗಲಿ, ಅವರ ಪತ್ನಿ ಆಗಲಿ   ತಪ್ಪು ಮಾಡಿಲ್ಲ. ಎಲ್ಲವನ್ನೂ ಕೋರ್ಟ್ ನಿರ್ಧರಿಸುತ್ತೆ ಎಂದು ಆರ್.ವಿ ದೇಶಪಾಂಡೆ ತಿಳಿಸಿದರು.

Key words: Former minister, RV Deshpande, CM, aspirant