Thursday, August 6, 2026

BDA Apartments

Home Crime ವನ್ಯಜೀವಿ ಬೇಟೆಗೆ ಯತ್ನ: ಓರ್ವ ವ್ಯಕ್ತಿ ಬಂಧನ, ಮೂವರು ಪರಾರಿ.

ವನ್ಯಜೀವಿ ಬೇಟೆಗೆ ಯತ್ನ: ಓರ್ವ ವ್ಯಕ್ತಿ ಬಂಧನ, ಮೂವರು ಪರಾರಿ.

ಮೈಸೂರು,ಸೆಪ್ಟಂಬರ್,10,2024 (www.justkannada.in):  ಅಕ್ರಮವಾಗಿ ಅರಣ್ಯ ಪ್ರದೇಶಕ್ಕೆ  ಪ್ರವೇಶಿಸಿ ವನ್ಯಜೀವಿ ಬೇಟೆಗೆ ಯತ್ನಿಸಿದ್ದ ಓರ್ವ ವ್ಯಕ್ತಿಯನ್ನ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದು, ಈ ವೇಳೆ ಮೂವರು ಪರಾರಿಯಾದ ಘಟನೆ ನಡೆದಿದೆ.

ನಾಗರಹೊಳೆ ರಾಷ್ಟ್ರೀಯ ಅರಣ್ಯ ವ್ಯಾಪ್ತಿಯ ಹುಣಸೂರು ಆನೆಚೌಕೂರು ಬಳಿ ಈ ಘಟನೆ ನಡೆದಿದೆ. ಚೌತಿ ಗ್ರಾಮದ ಸಂಪತ್ ಕುಮಾರ್ ಬಂಧಿರ ವ್ಯಕ್ತಿ. ಬಂಧಿತ ವ್ಯಕ್ತಿಯಿಂದ ಭೇಟೆಗೆ ಬಳಸಲಾಗಿದ್ದ ಒಂಟಿ ನಳಿಕೆ ಬಂದೂಕು, ಜೀವಂತ ಕಾಡತೂಸುಗಳು, ಮೊಬೈಲ್ ಟಾರ್ಚರ್ ವಶಕ್ಕೆ ಪಡೆಯಲಾಗಿದೆ.

ಪಿರಿಯಾಪಟ್ಟಣ ತಾಲ್ಲೂಕಿನ ಹೊಸೂರುಮಾಳ ಗ್ರಾಮದ ರವೀಂದ್ರ, ಚೌತಿ ಗ್ರಾಮದ ಪವನ್, ಮಹೇಶ್ ತಲೆ ಮರೆಸಿಕೊಂಡಿದ್ದಾರೆ. ಉಳಿದ ಮೂವರು ಆರೋಪಿಗಳ ಬಂಧನಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಬೀಸಿದ್ದಾರೆ.

Key words: wildlife, hunting, arrested, three, Escape