Saturday, August 8, 2026

BDA Apartments

Home Front Page ಹಗರಣ ಚರ್ಚೆ ಆಗಬಾರದೆಂದು ದರ್ಶನ್ ಫೋಟೊ ರಿಲೀಸ್ ಆರೋಪ: ಪ್ರಹ್ಲಾದ್ ಜೋಶಿಗೆ ಎಂ.ಬಿ ಪಾಟೀಲ್ ತಿರುಗೇಟು

ಹಗರಣ ಚರ್ಚೆ ಆಗಬಾರದೆಂದು ದರ್ಶನ್ ಫೋಟೊ ರಿಲೀಸ್ ಆರೋಪ: ಪ್ರಹ್ಲಾದ್ ಜೋಶಿಗೆ ಎಂ.ಬಿ ಪಾಟೀಲ್ ತಿರುಗೇಟು

ಬೆಂಗಳೂರು,ಸೆಪ್ಟಂಬರ್,7,2024 (www.justkannada.in): ಮುಡಾ, ವಾಲ್ಮೀಕಿ  ಹಗರಣದ ಬಗ್ಗೆ ಚರ್ಚೆ ಆಗಬಾರದು ಎಂದು  ನಟ ದರ್ಶನ್ ಫೋಟೊಗಳನ್ನ ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ  ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಎಂ.ಬಿ ಪಾಟೀಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಈ ರೀತಿ ಹೇಳಿಕೆ ಕೊಡುವುದು ಸರಿಯಲ್ಲ. ಪ್ರಹ್ಲಾದ್ ಜೋಶಿ ಬುದ್ದಿವಂತರು ಅವರು ಅರ್ಥ ಮಾಡಿಕೊಳ್ಳಬೇಕು ಜೈಲಿನಲ್ಲಿ ಅಕ್ರಮ ಹಗರಣ ಕಂಡು ಬಂದಾಗ ಇತಿಶ್ರೀ ಹಾಡಬೇಕು ವಿಚಾರ ಡೈವರ್ಟ್ ಮಾಡುತ್ತಿದ್ದಾರೆ ಅನ್ನೋದು ಪರಮಾವಧಿ ಎಂದು ಟೀಕಿಸಿದರು.

ಮುಡಾ ಹಗರಣದ ಆರೋಪದ ಬಗ್ಗೆ ಕೋರ್ಟ್ ನಲ್ಲಿ ಗೊತ್ತಾಗುತ್ತೆ ಕೋವಿಡ್ ಸಂದರ್ಭದಲ್ಲಿ ಸಾವಿರಾರು ಕೋಟಿ ಲೂಟಿ ಮಾಡಲಾಗಿದೆ. ಬೆಡ್, ಪಿಪಿಇ ಕಿಟ್ ಖರೀದಿಯ ಹೆಸರಲ್ಲಿ ಲೂಟಿ ಮಾಡಿದ್ದಾರೆ.  ಸಾವಿರ ಕೊಟಿ ಲೂಟಿ ಮಾಡಿದ ಬಗ್ಗೆ ಪ್ರಶ್ನೆ ಮಾಡಬಾರದಾ..? ಹಾಗಾದರೇ ಬಹುಶಃ  ಸಾವಿರಾರು ಕೋಟಿ ಎಲೆಕ್ಷನ್ ಫಂಡ್ ಗೆ ಹೋಗಿರಬೇಕು.  ಅದೇ ಹಣದಲ್ಲಿ ಬಿಜೆಪಿ ಚುನಾವಣೆ ಮಾಡಿದ್ದಾರಾ?  ಸಾವಿನ ಸಂದರ್ಭದಲ್ಲಿ ಹಣ ಮಾಡುವವರನ್ನು ಯಾರೂ ಕ್ಷಮಿಸಲ್ಲ ಎಂದು ಎಂ.ಬಿ ಪಾಟೀಲ್ ಕಿಡಿಕಾರಿದರು.

Key words: release, Darshan, photo, scandal, MB Patil, Prahlad Joshi