Friday, September 18, 2026

BDA Apartments

ಲಿಯೋನೆಲ್ ಮೆಸ್ಸಿಗೆ ವರ್ಷದ ಫಿಫಾ ಆಟಗಾರ ಪ್ರಶಸ್ತಿ BDA JK_Adv BDA Adv
Home Front Page ಲಿಯೋನೆಲ್ ಮೆಸ್ಸಿಗೆ ವರ್ಷದ ಫಿಫಾ ಆಟಗಾರ ಪ್ರಶಸ್ತಿ

ಲಿಯೋನೆಲ್ ಮೆಸ್ಸಿಗೆ ವರ್ಷದ ಫಿಫಾ ಆಟಗಾರ ಪ್ರಶಸ್ತಿ

ರೋಮ್, ಸೆಪ್ಟೆಂಬರ್ 24, 2019 (www.justkannada.in): ಲಿಯೋನೆಲ್ ಮೆಸ್ಸಿ ವರ್ಷದ ಫಿಫಾ ಪುರುಷರ ಫಿಫಾ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಳೆದ ಆವೃತ್ತಿಯ ಚಾಂಪಿಯನ್ಸ್ ಲೀಗ್ ಚಾಂಪಿಯನ್ ಲಿವರ್ಪೂಲ್ ತಂಡದ ವರ್ಗಿಲ್ ವಾನ್ ಡಿಜ್ಕ್ ಕಳೆದ ತಿಂಗಳು ಯುಇಎಫ್‍ಎ ಆಟಗಾರ ಪ್ರಶಸ್ತಿ ಪಡೆದುಕೊಂಡಿದ್ದರು. ಇದೀಗ, ಅವರನ್ನು ಮೆಸ್ಸಿ ಹಿಂದಿಕ್ಕಿ ವರ್ಷದ ಫಿಫಾ ಆಟಗಾರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ಜುವೆಂಟಾಸ್ ಮುಂಚೂಣಿ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಕೂಡ ಈ ಪ್ರಶಸ್ತಿ ರೇಸ್‍ನಲ್ಲಿ ಇದ್ದರು. ಆದರೆ, ಪ್ರಶಸ್ತಿ ವಿತರಣಾ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ.