Thursday, September 10, 2026

BDA Apartments

Home Cinema ಮಳೆಪ್ರವಾಹಕ್ಕೆ ಆಂಧ್ರ, ತೆಲಂಗಾಣ ತತ್ತರ: ಎರಡು ರಾಜ್ಯಗಳಿಗೆ 1 ಕೋಟಿ ರೂ. ನೆರವು ನೀಡಿದ ನಟ...

ಮಳೆಪ್ರವಾಹಕ್ಕೆ ಆಂಧ್ರ, ತೆಲಂಗಾಣ ತತ್ತರ: ಎರಡು ರಾಜ್ಯಗಳಿಗೆ 1 ಕೋಟಿ ರೂ. ನೆರವು ನೀಡಿದ ನಟ ಚಿರಂಜೀವಿ

ಹೈದರಾಬಾದ್,ಸೆಪ್ಟಂಬರ್,4,2024 (www.justkannada.in):  ಭಾರಿ ಮಳೆಯಿಂದಾಗಿ ಆಂಧ್ರ ಮತ್ತು ತೆಲಂಗಾಣ ರಾಜ್ಯಗಳು ತತ್ತರಿಸಿದ್ದು ಅಪಾರ ಪ್ರಮಾಣದ ನಷ್ಟ, ಜೀವಹಾನಿ ಉಂಟಾಗಿದೆ. ಈ ಮಧ್ಯೆ ಎರಡು ರಾಜ್ಯಗಳಿಗೆ ತೆಲುಗು ನಟ ಚಿರಂಜೀವಿ 1 ಕೋಟಿ ರೂ. ನೆರವು ನೀಡಿದ್ದಾರೆ.

ಖ್ಯಾತ ನಟ ಚಿರಂಜೀವಿ ಅವರು ತೆಲಂಗಾಣ ಮತ್ತು ಆಂಧ್ರಪ್ರದೇಶದ ಪ್ರವಾಹ ಪೀಡಿತ ರಾಜ್ಯಗಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲಾ 50 ಲಕ್ಷ ರೂ. ನೀಡಿದ್ದಾರೆ.

ಪ್ರವಾಹ ದುರಂತದಿಂದಾಗ ತೆಲಂಗಾಣ ಮತ್ತು ಆಂಧ್ರಪ್ರದೇಶ ತತ್ತರಿಸಿರುವ ಬಗ್ಗೆ ನಟ ಚಿರಂಜೀವಿ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಜನರ ನಷ್ಟವು ನನಗೆ ಅತ್ಯಂತ ದುಃಖವನ್ನುಂಟುಮಾಡುತ್ತದೆ ಎಂದು ಹೇಳಿದ್ದಾರೆ.

Key words: Andhra, Telangana, rain, actor, Chiranjeevi