Sunday, August 23, 2026

BDA Apartments

Home Front Page ಗಣಪತಿ ಕೂರಿಸಲು ಸಿಂಗಲ್ ವಿಂಡೋ ಪರ್ಮಿಷನ್ ಗೆ ಅವಕಾಶ ಕಲ್ಪಿಸಿ- ಅಪರ ಜಿಲ್ಲಾಧಿಕಾರಿಗೆ ಮನವಿ

ಗಣಪತಿ ಕೂರಿಸಲು ಸಿಂಗಲ್ ವಿಂಡೋ ಪರ್ಮಿಷನ್ ಗೆ ಅವಕಾಶ ಕಲ್ಪಿಸಿ- ಅಪರ ಜಿಲ್ಲಾಧಿಕಾರಿಗೆ ಮನವಿ

ಮೈಸೂರು,ಆಗಸ್ಟ್,22,2024 (www.justkannada.in): ಗಣಪತಿಗಳನ್ನು ಕೂರಿಸಲು ಸಿಂಗಲ್ ವಿಂಡೋ ಅನುಮತಿಗೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಅಪರ ಜಿಲ್ಲಾಧಿಕಾರಿ ಪಿ. ಶಿವರಾಜು ಅವರಿಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಚ್‍.ಜಿ  ಗಿರಿಧರ್ ಮನವಿ ಮಾಡಿದರು.

ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಎಚ್‌.ಜಿ ಗಿರಿಧರ್ ನೇತೃತ್ವದಲ್ಲಿ ಸಿದ್ದಾರ್ಥ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಗಣಪತಿಗಳನ್ನು ಕೂರಿಸಲು ಸಿಂಗಲ್ ವಿಂಡೋ ಪರ್ಮಿಷನ್ ಗೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಅಪರ ಜಿಲ್ಲಾಧಿಕಾರಿ ಪಿ ಶಿವರಾಜು ಅವರಿಗೆ ಮನವಿ ಸಲ್ಲಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕವಾಗಿ ಅನೇಕ ಸಂಘ ಸಂಸ್ಥೆಗಳು ಮತ್ತು ಯುವಕರು ರಸ್ತೆ ಬದಿಯಲ್ಲಿ ಹಾಗೂ ಪಾರ್ಕ್ ಗಳಲ್ಲಿ ಮತ್ತು ಅವರ ಏರಿಯಾಗಳಲ್ಲಿ  ಗಣಪತಿಗಳನ್ನು ಕೂರಿಸಲು ಅನುಮತಿ ಒಂದೇ ಕಡೆ ನೀಡಬೇಕು. ಕಾರ್ಪೊರೇಷನ್, ಕೆಇಬಿ, ಕೆಎಸ್ಆರ್ ಟಿಸಿ ಮತ್ತು ಪೊಲೀಸ್ ಹಾಗೂ ಅಗ್ನಿಶಾಮಕ ದಳ ಈ ಎಲ್ಲವೂ ಒಂದೇ ಕಡೆ ಅರ್ಜಿಗಳನ್ನು ತೆಗೆದುಕೊಂಡು 24 ಗಂಟೆಗಳಲ್ಲಿ ಪರಿಶೀಲಿಸಿ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಿ ಸರಳವಾಗಿ ಅನುಮತಿ ಸಿಗುವ ರೀತಿಯಲ್ಲಿ  ವ್ಯವಸ್ಥೆ ಮಾಡಬೇಕು. ಹಾಗೆಯೇ ಸಣ್ಣ ಸಣ್ಣ ಮಕ್ಕಳು  ಗಣಪತಿ ಕೂರಿಸಲು ಅನುಮತಿ ಅಗತ್ಯವಿಲ್ಲವೆಂದು ಘೋಷಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಬಿಜೆಪಿ ನಗರ ಉಪಾಧ್ಯಕ್ಷ ಎಸ್ ಕೆ ದಿನೇಶ್, ಜೋಗಿ ಮಂಜು, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಗೌಡ, ಎನ್ ಆರ್ ಕ್ಷೇತ್ರದ  ಅಧ್ಯಕ್ಷ ಸ್ಮಾರ್ಟ್ ಮಂಜು, ಎನ್ ಆರ್ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ನವೀನ್ ರಾಜ್, ಹಾಗೂ ಇನ್ನಿತರರು ಹಾಜರಿದ್ದರು.

Key words: Ganapati festival, appeal, BJP, mysore, DC