Sunday, August 23, 2026

BDA Apartments

Home Cinema ಮೇ 26ರಂದು ಝೀ ಕನ್ನಡದಲ್ಲಿ ‘ನಟ ಸಾರ್ವಭೌಮ’ ಪ್ರದರ್ಶನ

ಮೇ 26ರಂದು ಝೀ ಕನ್ನಡದಲ್ಲಿ ‘ನಟ ಸಾರ್ವಭೌಮ’ ಪ್ರದರ್ಶನ

ಬೆಂಗಳೂರು, ಮೇ 14, 2019 (www.justkannada.in): ಜೀ ಕನ್ನಡ ವಾಹಿನಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ನಟ ಸಾರ್ವಭೌಮ’ ಸಿನಿಮಾ ಪ್ರಸಾರ ಆಗುತ್ತಿದೆ.

ಮೇ 26 ರಂದು ನಟ ಸಾರ್ವಭೌಮ ಪ್ರಸಾರ ಆಗುತ್ತಿದೆ. ಜೀ ಕನ್ನಡ ವಾಹಿನಿ ಚಿತ್ರದ ಪ್ರೊಮೋದ ಜೊತೆಗೆ ಪ್ರಸಾರದ ದಿನಾಂಕವನ್ನು ಘೋಷಣೆ ಮಾಡಿದೆ.

‘ನಟ ಸಾರ್ವಭೌಮ’ ಸಿನಿಮಾ ಫೆಬ್ರವರಿ 7 ರಂದು ಬಿಡುಗಡೆಯಾಗಿ ಐವತ್ತು ದಿನವನ್ನು ಪೂರೈಸಿತ್ತು. ಪುನೀತ್ ಮೊದಲ ಬಾರಿಗೆ ಹಾರರ್ ಟಚ್ ಇರುವ ಸಿನಿಮಾದಲ್ಲಿ ನಟಿಸಿದ್ದರು.

ಪವನ್ ಒಡೆಯರ್ ಎರಡನೇ ಬಾರಿ ಪುನೀತ್ ಗೆ ನಿರ್ದೇಶನ ಮಾಡಿದ್ದರು. ರಾಕ್ ಲೈನ್ ವೆಂಕಟೇಶ್ ಚಿತ್ರದ ನಿರ್ಮಾಣ ಮಾಡಿದ್ದರು.