Tuesday, August 4, 2026

BDA Apartments

Home Front Page ಸಿಎಂ ವಿರುದ್ದ ಪ್ರಾಸಿಕ್ಯೂಷನ್ ಗೆ ಅನುಮತಿ: ರಾಜಭವನ ದುರ್ಬಳಕೆ ಸ್ಪಷ್ಟ- ಬಿ.ಕೆ ಹರಿಪ್ರಸಾದ್

ಸಿಎಂ ವಿರುದ್ದ ಪ್ರಾಸಿಕ್ಯೂಷನ್ ಗೆ ಅನುಮತಿ: ರಾಜಭವನ ದುರ್ಬಳಕೆ ಸ್ಪಷ್ಟ- ಬಿ.ಕೆ ಹರಿಪ್ರಸಾದ್

ಬೆಂಗಳೂರು,ಆಗಸ್ಟ್, 17,2024 (www.justkannada.in): ರಾಜಕೀಯ ದ್ವೇಷದಿಂದ ಸಿಎಂ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲಾಗಿದೆ. ಈ ಮೂಲಕ ರಾಜಭವನ ದುರ್ಬಳಕೆ ಮಾಡಿಕೊಂಡಿರುವುದು ಸ್ಪಷ್ಟ ಎಂದು ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಆರೋಪಿಸಿದರು.

ಈ ಕುರಿತು ಪ್ರತಿಕ್ರಿಯಿಸಿರುವ ಬಿ.ಕೆ ಹರಿಪ್ರಸಾದ್, ಜನರಿಂದ ಆಯ್ಕೆಯಾದ ಸರ್ಕಾರಗಳನ್ನು ಹಾಗೂ ಮುಖ್ಯಮಂತ್ರಿಗಳನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಕೈ ಹಾಕಿದ್ದು,  ಬಿಜೆಪಿಯವರ ದ್ವೇಷ ರಾಜಕಾರಣಕ್ಕೆ ಜನರೇ ಕಳೆದ ಲೋಕಸಭೆಯಲ್ಲೇ ಉತ್ತರ ಕೊಟ್ಟಾಗಿದೆ. ಆದರೂ ಕೂಡ ಬಿಜೆಪಿ ಮತ್ತು ಮೋದಿ ಸರ್ಕಾರ ಬುದ್ಧಿ ಕಲಿತಿಲ್ಲ ಎಂದು ಕಿಡಿಕಾರಿದರು.

ದಲಿತ-ಹಿಂದುಳಿದವರ ಹಾಗೂ ಬಡವರ ಪರವಾಗಿ ಕಾರ್ಯಕ್ರಮಗಳನ್ನು ನೀಡುವ ಸರ್ಕಾರಗಳನ್ನು ಅಸ್ಥಿರಗೊಳಿಸುವ ಪ್ರಜಾಪ್ರಭುತ್ವ ವಿರೋಧಿ ನಡೆಯ ವಿರುದ್ಧ ಜನರು ತಕ್ಕ ಉತ್ತರ ನೀಡಲಿದ್ದಾರೆ.  ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲಿನ ದ್ವೇಷದ ಪ್ರಕರಣಕ್ಕೆ ಕಾನೂನು ವ್ಯವಸ್ಥೆಯ ಮೂಲಕವೇ ಉತ್ತರ ಕೊಡುತ್ತೇವೆ ಎಂದು ಬಿ.ಕೆ ಹರಿಪ್ರಸಾದ್ ತಿಳಿಸಿದರು.

Key words: prosecution, against, CM. Misuse, Raj Bhavan, BK Hariprasad