Thursday, August 6, 2026

BDA Apartments

Home Front Page ಮೈಸೂರಿನಲ್ಲಿ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಪಾಲ್ಗೊಂಡ ಲಕ್ಷಾಂತರ ಮಂದಿ

ಮೈಸೂರಿನಲ್ಲಿ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಪಾಲ್ಗೊಂಡ ಲಕ್ಷಾಂತರ ಮಂದಿ

 ಮೈಸೂರು,ಆಗಸ್ಟ್.9,2024 (www.justkannada.in):  ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವಿರುದ್ಧ ವಿರೋಧ ಪಕ್ಷದ ನಾಯಕರಿಂದ ಪಾದಯಾತ್ರೆ ಮೂಲಕ ಆರೋಪಗಳ ಸರಮಾಲೆಯನ್ನೆ ತಂದೊಟ್ಟಿದೆ, ಅದೆಲ್ಲದಕ್ಕೂ ಪ್ರತಿ ಉತ್ತರ ಕೊಡುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷವೂ ಇಂದು ಮೈಸೂರಿನಲ್ಲಿ ಬೃಹತ್ ಜನಾಂದೋಲನವನ್ನು ಹಮ್ಮಿಕೊಂಡಿತ್ತು.

ಈ ಸಮಾವೇಶಕ್ಕೆ ಹಲವು ಭಾಗಗಳಿಂದ ಜನರು ತಂಡೋಪ ತಂಡವಾಗಿ ಮೈಸೂರಿನ ಮಹಾರಾಜ ಗ್ರೌಂಡ್ ನಲ್ಲಿ ಜಮಾಯಿಸಿದ್ದರು, ಸುಮಾರು ಒಂದು ಲಕ್ಷಕ್ಕೂ ಅಧಿಕ ಆಸನದ ವ್ಯವಸ್ಥೆ ಮಾಡಲಾಗಿದ್ದರು ನಿರಿಕ್ಷೆಗೂ ಮೀರಿ ಜನರು ಸಮಾವೇಶಕ್ಕೆ ಆಗಮಿಸಿದ್ದರು. ಅದರಂತೆ ವಾರ್ಡ್ ನಂಬರ್ 50 ರ ಪಾಲಿಕೆ ಸದಸ್ಯ ಲೋಕೇಶ್ ಪಿಯಾ ಅವರ ನೇತೃತ್ವದಲ್ಲಿ ಐನೂರಕ್ಕೂ ಹೆಚ್ಚು ಜನರು ಸಮಾವೇಶಕ್ಕೆ ತೆರಳಿದರು.

ನಗಾರಿ, ಪಟಾಕಿ ಸಿಡಿಸುವ ಮೂಲಕ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ‌ ಪೂಜೆ ಸಲ್ಲಿಸಿ ಪಾದಯಾತ್ರೆಯ ಮೂಲಕ ಮಹಾರಾಜ ಮೈದಾನಕ್ಕೆ ತೆರಳಿದರು. ಇದೆ ಸಂಧರ್ಭದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಎಂ ಲಕ್ಷ್ಮಣ್, ರಾಮು, ಸತೀಶ್, ಕುಮಾರ್, ಸ್ವಾಮೀ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು .

key words:people, participated, Congress, Janandola convention