Friday, July 31, 2026

BDA Apartments

Home Front Page ನನ್ನನ್ನು ಟಾರ್ಗೆಟ್ ಮಾಡಿ ಮೈತ್ರಿ ಪಕ್ಷಗಳಿಂದ ಸರ್ಕಾರ ದುರ್ಬಲಕ್ಕೆ ಯತ್ನ: ಸಿಎಂ ಸಿದ್ದರಾಮಯ್ಯ

ನನ್ನನ್ನು ಟಾರ್ಗೆಟ್ ಮಾಡಿ ಮೈತ್ರಿ ಪಕ್ಷಗಳಿಂದ ಸರ್ಕಾರ ದುರ್ಬಲಕ್ಕೆ ಯತ್ನ: ಸಿಎಂ ಸಿದ್ದರಾಮಯ್ಯ

ಮೈಸೂರು,ಆಗಸ್ಟ್,7,2024 (www.justkannada.in):  ಬಿಜೆಪಿ  ಜೆಡಿಎಸ್ ನವರು ನನ್ನನ್ನ ಟಾರ್ಗೆಟ್ ಮಾಡುತ್ತಿದ್ದಾರೆ.  ನನ್ನನ್ನು ಟಾರ್ಗೆಟ್ ಮಾಡಿ ಸರ್ಕಾರ ದುರ್ಬಲಗೊಳಸಲು ಯತ್ನಿಸುತ್ತಿದ್ದಾರೆ  ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಜೆಡಿಎಸ್ ನವರ ಸುಳ್ಳನ್ನು ಜನರು ನಂಬುವುದಿಲ್ಲ ಅಪರೇಷನ್ ಕಮಲ ಮೂಲಕ ಸರ್ಕಾರ ಅಸ್ಥಿರಕ್ಕೆ ಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ನನ್ನನ್ನ ಟಾರ್ಗೆಟ್ ಮಾಡಿದ್ದಾರೆ. ಆದರೆ ಸರ್ಕಾರವನ್ನ ದುರ್ಬಲಗೊಳಿಸುವ ಅವರ ಯತ್ನ ಯಶಸ್ವಿಯಾಗಲ್ಲ ಎಂದರು.

ನಮ್ಮ ಸರ್ಕಾರ ಬಡವರ ಪರ ಕೆಲಸ ಮಾಡುತ್ತಿದೆ ಹೀಗಾಗಿ ನಮ್ಮ ಸರ್ಕಾರದ ಬಗ್ಗೆ ಅವರಿಗೆ ಭಯವಿದೆ. ಗ್ಯಾರಂಟಿಗಳನ್ನ ನಿಲ್ಲಿಸುತ್ತಾರೆ ಎಂದು ಸುಳ್ಳು ಹೇಳಿದ್ರು. ನಾವು ಗ್ಯಾರಂಟಿಗಳನ್ನ ನಿಲ್ಲಿಸಿದ್ದೀವಾ ಹೇಳಲಿ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

Key words: Alliance parties, target, me, CM Siddaramaiah