Monday, October 5, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Front Page ಮೈಸೂರು ವಿವಿ ಅತಿಥಿ ಉಪನ್ಯಾಸಕರಿಂದ ಮುಂದುವರಿದ ಅಹೋರಾತ್ರಿ ಧರಣಿ

ಮೈಸೂರು ವಿವಿ ಅತಿಥಿ ಉಪನ್ಯಾಸಕರಿಂದ ಮುಂದುವರಿದ ಅಹೋರಾತ್ರಿ ಧರಣಿ

ಮೈಸೂರು,ಆಗಸ್ಟ್,6,2024 (www.justkannada.in): ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ  ಆಗ್ರಹಿಸಿ ಮೈಸೂರು ವಿಶ್ವ ವಿದ್ಯಾನಿಲಯದ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಅಹೋರಾತ್ರಿ  ಧರಣಿ ಮುಂದುವರೆದಿದೆ.

2023-24 ಶೈಕ್ಷಣಿಕ ಸಾಲಿನ ಅತಿಥಿ ಉಪನ್ಯಾಸಕರನ್ನು ಮುಂದುವರೆಸುವಂತೆ ಆಗ್ರಹಿಸಿ ಮೈಸೂರು ವಿಶ್ವವಿದ್ಯಾನಿಲಯ ಅತಿಥಿ ಉಪನ್ಯಾಸಕರ ಸಂಘದ ವತಿಯಿಂದ ನಿನ್ನೆ ರಾತ್ರಿಯಿಂದಲೂ ಕ್ರಾಫರ್ಡ್ ಹಾಲ್ ಬಳಿ ಧರಣಿ ನಡೆಸಲಾಗುತ್ತಿದೆ.ಮೈಸೂರು ವಿವಿ ಅತಿಥಿ ಉಪನ್ಯಾಸಕರಿಂದ ಮುಂದುವರಿದ ಅಹೋರಾತ್ರಿ ಧರಣಿ mysore university 1

ಪ್ರಸ್ತುತವಾಗಿ ವಾಕ್ ಇನ್ ಇಂಟರ್ವ್ಯೂ ಆಯ್ಕೆ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿರುವ ಧರಣಿನಿರತ ಅತಿಥಿ ಉಪನ್ಯಾಸಕರು, ಹಲವು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವರನ್ನ ಮುಂದುವರಿಸಬೇಕು.ವಾಕ್ ಇನ್ ಇಂಟರ್ ವ್ಯೂ ಆಯ್ಕೆ ಕೈ ಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ರಾತ್ರಿಯಿಂದಲೂ ಅಹೋರಾತ್ರಿ ಧರಣಿ ಮುಂದುವರಿಸಿದ್ದು, ಸ್ಥಳಕ್ಕೆ ಕುಲಪತಿ ಬರುವಂತೆ ಪಟ್ಟು ಹಿಡಿದರು. ಸ್ಥಳಕ್ಕೆ ಕುಲಪತಿ ಲೋಕನಾಥ್ ಅವರು ಬರುವವರಗೂ ಧರಣಿ ಕೈ ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

Key words: Mysore University, guest lecturer, protest