Thursday, July 30, 2026

BDA Apartments

Home Front Page ರಾಜ್ಯ ಸರ್ಕಾರ ತೆಗೆಯಲು ದೆಹಲಿಯಲ್ಲಿ ಕುಳಿತು ಸ್ಕೆಚ್- ಸಚಿವ ಕೃಷ್ಣಭೈರೇಗೌಡ ಆರೋಪ

ರಾಜ್ಯ ಸರ್ಕಾರ ತೆಗೆಯಲು ದೆಹಲಿಯಲ್ಲಿ ಕುಳಿತು ಸ್ಕೆಚ್- ಸಚಿವ ಕೃಷ್ಣಭೈರೇಗೌಡ ಆರೋಪ

ಮಂಡ್ಯ,ಆಗಸ್ಟ್,6,2024 (www.justkannada.in):  ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನ ಬೀಳಿಸಲು ಬಿಜೆಪಿ-ಜೆಡಿಎಸ್ ವಾಮಮಾರ್ಗ ಅನುಸರಿಸುತ್ತಿವೆ. ಸರ್ಕಾರ ತೆಗೆಯಲು ದೆಹಲಿಯಲ್ಲಿ ಕುಳಿತು ಸ್ಕೆಚ್ ಹಾಕುತ್ತಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಆರೋಪ ಮಾಡಿದ್ದಾರೆ.

ಜನಾಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಕೃಷ್ಣಭೈರೇಗೌಡ, ಸರ್ಕಾರ ಬೀಳಿಸಲು ದೆಹಲಿಯಲ್ಲಿ ಕುಳಿತು ಸ್ಕೆಚ್ ಹಾಕಿದ್ದಾರೆ. ಆದರ ಮುಂದುವರೆದ ಭಾಗವಾಗಿ ಇಡಿ ಅಧಿಕಾರಿಗಳನ್ನ ಬಿಟ್ಟಿದ್ದಾರೆ  ಇಡಿ ಸಂಸ್ಥೆ ಸೀಳು ನಾಯಿಯಂತೆ ನಡೆದುಕೊಳ್ಳುತ್ತಿದೆ ಎಂದು ಕಿಡಿಕಾರಿದರು.

ಇನ್ನೂ ನಾಲ್ಕು ವರ್ಷಗಳ ಕಾಲ ನಮ್ಮ ಅಧಿಕಾರಾವಧಿ ಇದೆ. ಆದ್ರೆ ಕಾಂಗ್ರೆಸ್ ವಿರುದ್ದ ಪಿತೂರಿ ಮಾಡುತ್ತಿದ್ದಾರೆ. ಮುಡಾ, ವಾಲ್ಮೀಕಿ ಹಗರಣದಲ್ಲಿ ಸಿದ್ದರಾಮಯ್ಯ ಪಾತ್ರ ಇದೆ ಎಂದು ಹೇಳಲು ಒತ್ತಾಯಿಸುತ್ತಿದ್ದಾರೆ. ಸುಳ್ಳು ಹೇಳದಿದ್ದರೇ ಜೈಲಿಗೆ ಹಾಕುವುದಾಗಿ ಬೆದರಿಸುತ್ತಿದ್ದಾರೆ.  ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲು ಇಡಿ ತನಿಖೆ ನಡೆಸುತ್ತಿಲ್ಲ. ನಮ್ಮ ಸರಕಾರವನ್ನ ಹಗರಣದ ಸುಳಿಗೆ ಸಿಲುಕಿಸಲು ಯತ್ನಿಸುತ್ತಿದೆ ಎಂದು ಕೃಷ್ಣಭೈರೇಗೌಡ ವಾಗ್ದಾಳಿ ನಡೆಸಿದರು.

Key words: Minister, Krishnabaire Gowda, government, BJP, JDS