Saturday, August 15, 2026

BDA Apartments

Home Crime ಅಪಘಾತದಲ್ಲಿ ವಿದ್ಯಾರ್ಥಿನಿ ಸಾವು: ತಂದೆ ಬರುವಿಕೆಗಾಗಿ ಮೃತದೇಹ ಕಾದಿರಿಸಿದ ಕುಟುಂಬಸ್ಥರು

ಅಪಘಾತದಲ್ಲಿ ವಿದ್ಯಾರ್ಥಿನಿ ಸಾವು: ತಂದೆ ಬರುವಿಕೆಗಾಗಿ ಮೃತದೇಹ ಕಾದಿರಿಸಿದ ಕುಟುಂಬಸ್ಥರು

ಮೈಸೂರು,ಆಗಸ್ಟ್,6,2024 (www.justkannada.in): ಡಿವೈಡರ್ ಗೆ ಸ್ಕೂಟರ್ ಡಿಕ್ಕಿಯಾಗಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಕೂರ್ಗಳ್ಳಿಯ ಬೆಮೆಲ್ ಮುಂಭಾಗ  ನಡೆದಿದೆ.

ಕನಕಗಿರಿ ನಿವಾಸಿ ನಾಗರಾಜು ಪುತ್ರಿ ಕವನ(18) ಮೃತ ವಿದ್ಯಾರ್ಥಿನಿ. ಈ ನಡುವೆ ಮನೆ ಬಿಟ್ಟು ಹೋದ ತಂದೆ ನಾಗರಾಜು ಬರುವಿಕೆಗಾಗಿ ಮೃತದೇಹವನ್ನ ಕುಟುಂಬಸ್ಥರು  ಕಾದಿರಿಸಿದ್ದಾರೆ. ಮೂರು ತಿಂಗಳ ಹಿಂದೆ ವಿದ್ಯಾರ್ಥಿನಿ ತಂದೆ ಮನೆಬಿಟ್ಟು ಹೋಗಿದ್ದು, ಎಲ್ಲೆ ಇದ್ದರೂ ಮಗಳ ಅಂತ್ಯಕ್ರಿಯೆಗೆ ಬರುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.  ಹೀಗಾಗಿ ಒಂದು ದಿನದ ಮಟ್ಟಿಗೆ ಮೃತದೇಹ ಕಾದಿರಿಸಿದ್ದಾರೆ.

ವಿದ್ಯಾರ್ಥಿನಿ ಕವನ ಬಿಜಿಎಸ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ಓದುತ್ತಿದ್ದು, ನಿನ್ನೆ ಬೆಳಿಗ್ಗೆ ಸ್ನೇಹಿತರ ಜೊತೆ ಹೋಗುತ್ತಿದ್ದ ವೇಳೆ ಆಯಾತಪ್ಪಿ ಸ್ಕೂಟರ್ ಡಿವೈಡರ್ ಗೆ ಡಿಕ್ಕಿಯಾಗಿದೆ. ಈ ವೇಳೆ ಡಿಕ್ಕಿಹೊಡೆದ ರಭಸಕ್ಕೆ ಕವನ  ಕೆಳಕ್ಕೆ ಬಿದ್ದಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಈ ಕುರಿತು ವಿವಿಪುರಂ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mysore, Student, dies, accident