Thursday, August 13, 2026

BDA Apartments

Home Front Page ಹೆಚ್.ಡಿಕೆ ಮೊದಲು ತಮ್ಮ ಸಹೋದರನ ಆಸ್ತಿ ಬಗ್ಗೆ ಉತ್ತರಿಸಲಿ-ಡಿಸಿಎಂ ಡಿಕೆ ಶಿವಕುಮಾರ್

ಹೆಚ್.ಡಿಕೆ ಮೊದಲು ತಮ್ಮ ಸಹೋದರನ ಆಸ್ತಿ ಬಗ್ಗೆ ಉತ್ತರಿಸಲಿ-ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಆಗಸ್ಟ್,5,2024 (www.justkannada.in):  ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಟಾಕ್ ವಾರ್ ಮುಂದುವರೆದಿದ್ದು ತಮ್ಮ ಆಸ್ತಿ ಬಗ್ಗೆ ಪ್ರಶ್ನಿಸಿದ ಹೆಚ್.ಡಿ ಕುಮಾರಸ್ವಾಮಿಗೆ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಅವರು,  ಕೇಂದ್ರದಿಂದ ರಾಜ್ಯಕ್ಕೆ ಯಾಕೆ ಹಣ ಬಿಡುಗಡೆ ಮಾಡಿಸಲಿಲ್ಲ?  ನೀವು ಮಾಡಿರುವ ಹಗರಣಗಳ ಬಗ್ಗೆ ಉತ್ತರ ನೀಡಿ. ಯಾರು ಏನು ಅಂತಾ ಈವರೆಗೂ ಉತ್ತರ ಕೊಟ್ಟಿಲ್ಲ. ನನ್ನ ಆಸ್ತಿ ಬಗ್ಗೆ ಕೇಳಿದ್ದಾರೆ. ಮೊದಲು ಎಚ್ ಡಿಕೆ ಸಹೋದರನ ಆಸ್ತಿ ಬಗ್ಗೆ ಉತ್ತರಿಸಲಿ ಎಂದು ಸವಾಲು ಹಾಕಿದರು.

ವಿಜಯೇಂದ್ ನನ್ನು ಭ್ರಷ್ಟಾಚಾರದ ಪಿತಾಮಹ ಎಂದರು. ಅಲ್ಲದೇ ಬಿಎಸ್  ಯಡಿಯೂರಪ್ಪ ಯಾಕೆ ಜೈಲಿಗೆ ಹೋಗಿದ್ದರು ಎಂಬುದರ ಬಗ್ಗೆ ದೋಸ್ತಿ ನಾಯಕರು ಉತ್ತರಿಸಲಿ ಎಂದು ಡಿಕೆ ಶಿವಕುಮಾರ್ ಆಗ್ರಹಿಸಿದರು.

Key words: HDK, brother, property, DCM, DK Shivakumar