Thursday, August 6, 2026

BDA Apartments

Home Front Page ರಾಮನಗರ ಹೆಸರು ಬದಲಿಸಿದ್ರೆ ಅಭಿವೃದ್ಧಿ ಜೊತೆಗೆ ಜನರಿಗೂ ಅನುಕೂಲ-ಸಚಿವ ಕೃಷ್ಣಭೈರೇಗೌಡ

ರಾಮನಗರ ಹೆಸರು ಬದಲಿಸಿದ್ರೆ ಅಭಿವೃದ್ಧಿ ಜೊತೆಗೆ ಜನರಿಗೂ ಅನುಕೂಲ-ಸಚಿವ ಕೃಷ್ಣಭೈರೇಗೌಡ

ಮಂಡ್ಯ,ಜುಲೈ,27,2024 (www.justkannada.in): ರಾಮನಗರ ಹೆಸರನ್ನ ಬೆಂಗಳೂರು ದಕ್ಷಿಣ ಎಂದು ಬದಲಿಸಿದರೇ ಅಭಿವೃದ್ಧಿ ಜೊತೆಗೆ  ಜನರಿಗೆ ಅನುಕೂಲವಾಗಲಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದರು.

ಇಂದು ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಸಚಿವ ಕೃಷ್ಣಭೈರೇಗೌಡ, ರಾಮನಗರ ಜಿಲ್ಲೆಯ  ಪ್ರತಿನಿಧಿಗಳು ಶಾಸಕರು ಮನವಿ ಮಾಡಿದ್ದರು.  2007ಕ್ಕೂ ಮೊದಲು  ರಾಮನಗರವನ್ನ ಬೆಂಗಳೂರು ಗ್ರಾಮಾಂತರ ಎನ್ನುತ್ತಿದ್ದರು.  ಇದೀಗ ರಾಮನಗರ ಹೆಸರು ಬದಲಾವಣೆಗೆ ಅನುಮೋದನೆ ನೀಡಲಾಗಿದೆ. ಹೆಸರು ಬದಲಾಯಿಸಿದ್ರೆ ಅಭಿವೃದ್ದಿಯಾಗಲಿದೆ ಎಂದರು.

ಈ ಸಂಬಂಧ ಕೇಂದ್ರದಿಂದ ಎನ್ ಒಸಿ ಪಡೆಯಬೇಕು ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂದು ಹೆಸರಿಟ್ಟರೇ ಅಭಿವೃದ್ದಿ ಜೊತೆ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

Key words: Ramanagara, name, change,Minister, Krishnabhairegowda