Sunday, August 23, 2026

BDA Apartments

Home Front Page ಸ್ವಯಂ ಪ್ರೇರಿಣೆಯಿಂದ ಇಡಿ ತನಿಖೆ:  ಸಿಎಂ ಡಿಸಿಎಂ ಹೆಸರೇಳುವಂತೆ ಕಿರುಕುಳ- ಸಿಎಂ ಸಿದ್ದರಾಮಯ್ಯ ಕಿಡಿ

ಸ್ವಯಂ ಪ್ರೇರಿಣೆಯಿಂದ ಇಡಿ ತನಿಖೆ:  ಸಿಎಂ ಡಿಸಿಎಂ ಹೆಸರೇಳುವಂತೆ ಕಿರುಕುಳ- ಸಿಎಂ ಸಿದ್ದರಾಮಯ್ಯ ಕಿಡಿ

ಬೆಂಗಳೂರು,ಜುಲೈ,23,2024 (www.justkannada.in):  ವಾಲ್ಮೀಕಿ ನಿಗಮದಲ್ಲಿ ಅಕ್ರಮ ನಡೆದಿಲ್ಲ ಎಂದು ಹೇಳುವುದಿಲ್ಲ. ಆದರೆ ಇಡಿ ಸ್ವಯಂ ಪ್ರೇರಣೆಯಿಂದ ತನಿಖೆ ನಡೆಸುತ್ತಿದೆ.  ಸಿಎಂ, ಡಿಸಿಎಂ , ನಾಗೇಂದ್ರ ಹೆಸರು ಹೇಳುವಂತೆ ಕಿರುಕುಳ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ಕೇಂದ್ರ ಸರ್ಕಾರ ಮತ್ತು ಇಡಿ  ವಿರುದ್ದ ನಡೆದ ರಾಜ್ಯ ಕಾಂಗ್ರೆಸ್ ನಾಯಕರ  ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಒಂದೇ ಕೇಸ್ ನಲ್ಲಿ ಮೂರು ತನಿಖಾ ಸಂಸ್ಥೆಗಳು ವಿಚಾರಣೆ  ನಡೆಸುತ್ತಿವೆ. ವಾಲ್ಮೀಕಿ ನಿಗಮದಲ್ಲಿ ಅಕ್ರಮ ನಡೆದಿಲ್ಲ ಎಂದು ಹೇಳುತ್ತಿಲ್ಲ.  ನಿಗದಮ ಹಣ ವರ್ಗಾವಣೆಯಾಗಿರುವುದು  89.63 ಕೋಟಿ ರೂ. ಮಾತ್ರ ಎಂದರು.

ಸಿಎಂ, ಡಿಸಿಎಂ, ನಾಗೇಂದ್ರ ಹೆಸರೇಳುವಂತೆ ಇಡಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.

Key words: Valmiki corporation, scam, ED, CM Siddaramaiah