Saturday, August 22, 2026

BDA Apartments

Home Front Page ಬಿ.ನಾಗೇಂದ್ರ ಮಾತ್ರ ಅಲ್ಲ, ಸಿಎಂ ಸಿದ್ದರಾಮಯ್ಯ ಕೂಡ ಹಗರಣದಲ್ಲಿ ಭಾಗಿ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಬಿ.ನಾಗೇಂದ್ರ ಮಾತ್ರ ಅಲ್ಲ, ಸಿಎಂ ಸಿದ್ದರಾಮಯ್ಯ ಕೂಡ ಹಗರಣದಲ್ಲಿ ಭಾಗಿ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಚಿತ್ರದುರ್ಗ,ಜುಲೈ,20,2024 (www.justkannada.in):  ವಾಲ್ಮೀಕಿ ಅಭಿವೃದ್ದಿ ನಿಗಮ ಅಕ್ರಮ ಹಣ ವರ್ಗಾವಣೆ ಹಗರಣದಲ್ಲಿ ಕೇವಲ ಮಾಜಿ ಸಚಿವ ಬಿ. ನಾಗೇಂದ್ರ ಮಾತ್ರ ಅಲ್ಲ, ಸಿಎಂ ಸಿದ್ದರಾಮಯ್ಯ ಕೂಡ ಭಾಗಿಯಾಗಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾಕರಂದ್ಲಾಜೆ ಆರೋಪಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶೋಭಾ ಕರಂದ್ಲಾಜೆ, ಹಗರಣದಲ್ಲಿ ಸಿಎಂ ಕೂಡ ಬಾಗಿಯಾಗಿದ್ದಾರೆ.  ಸಿದ್ದರಾಮಯ್ಯ ಪ್ರಾಮಾಣಿಕ ಸಿಎಂ ಎಂದು ನಾನು ಭಾವಿಸಿದ್ದೆ.  ಈಗ ಕೇಳಿ ಬರುತ್ತಿರುವ ಹಗರಣಗಳು ಬೆಚ್ಚಿ ಬೀಳಿಸಿವೆ ಕಾಂಗ್ರೆಸ್ ಹೈಕಮಾಂಡ್ ಸಿಎಂಗೆ ಟಾರ್ಗೆಟ್ ನೀಡಿದೆ ತೆಲಂಗಾಣ ರಾಜ್ಯದ ಚುನಾವಣೆಗೆ ಹಣ ಕೊಡಬೇಕಿತ್ತು. ಹೀಗಾಗಿ ನಿಗಮದ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಕಿಡಿಕಾರಿದರು.

ಸಿಎಂ ಸಿದ್ದರಾಮಯ್ಯ ಪತ್ನಿ ಮುಡಾ ನಿವೇಶನ ಪಡೆದಿದ್ದಾರೆ. ಸಿದ್ಧರಾಮಯ್ಯ ಸಾಂವಿಧಾನಿಕ ಹುದ್ದೆಯಲ್ಲಿದ್ದಾಗ ಇದು ನಡೆದಿದೆ. ಮುಡಾ ಹಗರಣದ ತನಿಖೆಯನ್ನ ಸಿಬಿಐಗೆ ವಹಿಸಬೇಕು ಅರ್ಕಾವತಿ ಹಗರಣದಂತೆ  ಈ ಕೇಸ್ ಅನ್ನೂ ಮುಚ್ಚಿ ಹಾಕಲು ಯತ್ನಸುತ್ತಿದ್ದಾರೆ ಎಂದು  ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ  ಆರೋಪಿಸಿದರು.

Key words: CM Siddaramaiah, involved, scam, Shobha Karandlaje