Sunday, September 13, 2026

BDA Apartments

ಬಿಜೆಪಿ ಅವಧಿಯ ಹಗರಣ ತನಿಖೆ ಎಂದ ಸಿಎಂಗೆ ಬಿವೈ ವಿಜಯೇಂದ್ರ ತಿರುಗೇಟು BDA JK_Adv BDA Adv
Home Front Page ಬಿಜೆಪಿ ಅವಧಿಯ ಹಗರಣ ತನಿಖೆ ಎಂದ ಸಿಎಂಗೆ ಬಿವೈ ವಿಜಯೇಂದ್ರ ತಿರುಗೇಟು

ಬಿಜೆಪಿ ಅವಧಿಯ ಹಗರಣ ತನಿಖೆ ಎಂದ ಸಿಎಂಗೆ ಬಿವೈ ವಿಜಯೇಂದ್ರ ತಿರುಗೇಟು

ಚಿತ್ರದುರ್ಗ,ಜುಲೈ,20,2024 (www.justkannada.in):  ಬಿಜೆಪಿ ಅವಧಿಯಲ್ಲಿ ನಡೆದ ಹಗರಣಗಳ ಬಗ್ಗೆ ತನಿಖೆಗೆ ನಡೆಸುವುದಾಗಿ ಹೇಳಿದ್ದ ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಬಿವೈ ವಿಜಯೇಂದ್ರ, ತನಿಖೆ  ಮಾಡಲು ಸಿಎಂ ಸಿದ್ದರಾಮಯ್ಯರನ್ನ ಯಾರು ತಡೆದಿದ್ದಾರೆ ಸಿಎಂ ನಮಗೆ ಬೆದರಿಕೆ ಹಾಕುವ ಅವಶ್ಯಕತೆ ಇಲ್ಲ. ಮೊದಲು ಹಗರಣ ಬಗ್ಗೆ ಉತ್ತರಿಸಿ ಸರ್ಕಾರದಿಂದ ಎಸ್ ಟಿ ಸಮುದಾಯಕ್ಕೆ ದೊಡ್ಡ ಅನ್ಯಾಯವಾಗಿದೆ.  ಸಿಎಂ ಮೊದಲು ಹಗರಣವೇ ಆಗಿಲ್ಲ ಎಂದಿದ್ದಾರೆ ಈಗ ನಾಗೇಂದ್ರ ಅವರಿಗೂ ಇದಕ್ಕೂ ಸಂಬಂಧ ಇಲ್ಲ ಅಂತಿದ್ದಾರೆ.

ಪ್ರತಿ ಸಲ ಸಿಎಂ ಹೇಳಿಕೆ ವರಸೆ ಬದಲಿಸುತ್ತಿದ್ದಾರೆ. ಹಗರಣದಿಂದ ಸರ್ಕಾರ ಸಿಎಂಗೆ ಆತಂಕ. ಹೀಗಾಗಿ ಅದನ್ನ ಅಧಿಕಾರಿಗಳ ತಲೆಗೆ ಕಟ್ಟಲು  ಯತ್ನಿಸುತ್ತಿದ್ದಾರೆ.  ಸಿಎಂ ಸಿದ್ದರಾಮಯ್ಯ ಹಗರಣದ ಬಗ್ಗೆ ರಾಜೀನಾಮೆ ನೀಡಿ ಎಂದು ಆಗ್ರಹಿಸಿದರು.ಬಿಜೆಪಿ ಅವಧಿಯ ಹಗರಣ ತನಿಖೆ ಎಂದ ಸಿಎಂಗೆ ಬಿವೈ ವಿಜಯೇಂದ್ರ ತಿರುಗೇಟು by vijayendra

ವಾಲ್ಮೀಕಿ ಹಗರಣದಲ್ಲಿ ಸರ್ಕಾರ ಸಂಫೂರ್ಣ ಭಾಗಿಯಾಗಿದೆ.  ಸಿದ್ದರಾಮಯ್ಯ ಸಹ ರಾಜೀನಾಮೆ ನೀಡಬೇಕು ಹಣಕಾಸು ಇಲಾಖೆ ಸಿಎಂ ಬಳಿ ಇದೆ. ಸಿಎಂ ಬುಡಕ್ಕೆ ವಾಲ್ಮೀಕಿ ಹಗರಣ ಬಂದಿದೆ ಎಂದರು.

Key words: CM, Govt , Valmiki scam,  B.Y. Vijayendra