Friday, September 25, 2026

BDA Apartments

ಮಾಜಿ ಸಚಿವ ಬಿ.ನಾಗೇಂದ್ರ ಪತ್ನಿ ವಶಕ್ಕೆ ಪಡೆದ ED BDA JK_Adv BDA Adv
Home Front Page ಮಾಜಿ ಸಚಿವ ಬಿ.ನಾಗೇಂದ್ರ ಪತ್ನಿ ವಶಕ್ಕೆ ಪಡೆದ ED

ಮಾಜಿ ಸಚಿವ ಬಿ.ನಾಗೇಂದ್ರ ಪತ್ನಿ ವಶಕ್ಕೆ ಪಡೆದ ED

ಬೆಂಗಳೂರು,ಜುಲೈ,17,2024 (www.justkannada.in):  ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ ಪತ್ನಿ ಮಂಜುಳಾ ಅವರನ್ನ ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದುಕೊಂಡಿದೆ.

ಇಂದು ಬೆಳಗ್ಗೆ ಡಾಲರ್ಸ್‌ ಕಾಲೋನಿಯಲ್ಲಿರುವ ಅವರ ನಿವಾಸದಲ್ಲಿ ಇಡಿ ಅಧಿಕಾರಿಗಳು ಬಿ.ನಾಗೇಂದ್ರ ಪತ್ನಿ ಮಂಜುಳ ಅವರನ್ನ ವಶಕ್ಕೆ ಪಡೆದುಕೊಂಡು ಶಾಂತಿನಗರದಲ್ಲಿರುವ ಕಚೇರಿಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.ಮಾಜಿ ಸಚಿವ ಬಿ.ನಾಗೇಂದ್ರ ಪತ್ನಿ ವಶಕ್ಕೆ ಪಡೆದ ED nagendra-wife nagendra wife

ಹಣಕಾಸು ವ್ಯವಹಾರ ಸಂಬಂಧ, ನಾಗೇಂದ್ರ ಅವರ ಪತ್ನಿ ಮಂಜುಳ ಅವರ ಖಾತೆಗೆ ಹಣ ವರ್ಗಾವಣೆ ಶಂಕೆ ಮೇಲೆ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.  ವಾಲ್ಮೀಕಿ ನಿಗಮದಲ್ಲಿನ ಹಗರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಾಜಿ ಸಚಿವ ಬಿ ನಾಗೇಂದ್ರ ಅವರನ್ನು ಆರು ದಿನಗಳ ಕಾಲ ಇಡಿ ವಶಕ್ಕೆ  ನೀಡಿದೆ.

Key words: Former minister, B. Nagendra’s, wife, ED