Wednesday, September 30, 2026

BDA Apartments

ಮುಡಾ ಹಗರಣ: ಸಿಎಂ ರಕ್ಷಿಸುವ ಕೆಲಸವಾಗುತ್ತಿದೆ- ಸಂಸದ ಜಗದೀಶ್ ಶೆಟ್ಟರ್ BDA JK_Adv BDA...
Home Front Page ಮುಡಾ ಹಗರಣ: ಸಿಎಂ ರಕ್ಷಿಸುವ ಕೆಲಸವಾಗುತ್ತಿದೆ- ಸಂಸದ ಜಗದೀಶ್ ಶೆಟ್ಟರ್

ಮುಡಾ ಹಗರಣ: ಸಿಎಂ ರಕ್ಷಿಸುವ ಕೆಲಸವಾಗುತ್ತಿದೆ- ಸಂಸದ ಜಗದೀಶ್ ಶೆಟ್ಟರ್

ಹುಬ್ಬಳ್ಳಿ, ಜುಲೈ, 8,2024 (www.justkannada.in): ಸರಿಯಾದ ದಿಕ್ಕಿನಲ್ಲಿ ಮುಡಾ ಹಗರಣದ ತನಿಖೆಯಾಗುತ್ತಿಲ್ಲ . ಹಗರಣದಲ್ಲಿ ಸಿಎಂ ಸಿದ್ದರಾಮಯ್ಯರನ್ನ ರಕ್ಷಣೆ ಮಾಡುವ ಕೆಲಸವಾಗುತ್ತಿದೆ ಎಂದು ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಜಗದೀಶ್ ಶೆಟ್ಟರ್,  ಸಚಿವ ಹೆಚ್.ಸಿ ಮಹದೇವಪ್ಪ ಅವರು ನಿನ್ನೆ ಮೈಸೂರಿನ ಹೇಳಿಕೆ ನೀಡುವ ಮೂಲಕ  ಪೇಪರ್ ಹಾವು ಬಿಟ್ಟಿದ್ದಾರೆ.  ಮುಡಾ ಹಗರಣದಲ್ಲಿ ಬೇರೆ ಪಕ್ಷದವರು ಇದ್ದಾರೆ. ಬೇರೆಯವರು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದೊಂದು ಪೇಪರ್‌ ಹಾವು ಅಷ್ಟೇ,  ಸಿಎಂ ಸಿದ್ದರಾಮಯ್ಯ ರಕ್ಷಿಸಲು ಈ ರೀತಿ ಹೇಳಿಕೆ ಎಂದು ತಿಳಿಸಿದರು.ಮುಡಾ ಹಗರಣ jagadish

ಮುಡಾ ಹಗರಣ ಮುಖ್ಯಮಂತ್ರಿಗಳ ತಲೆಗೆ ಬರತ್ತದೆ ಎಂದು ಅವರನ್ನು ಬಚಾವ್‌ ಮಾಡಲು ಸುದ್ದಿಗೋಷ್ಠಿ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಸಿಎಂ ರಕ್ಷಿಸುವ ಕೆಲಸ ಆಗಬಾರದು ಎಂದು ಜಗದೀಶ್ ಶೆಟ್ಟರ್ ತಿಳಿಸಿದರು

Key words: Muda, scam, protect, CM Siddaramaiah, Jagdish Shettar