Sunday, September 20, 2026

BDA Apartments

ಪ್ರೀತಿ ನಿರಾಕರಿಸಿದ್ದಕ್ಕೆ 2 ತಿಂಗಳ ಮಗುವನ್ನೇ ಕೊಂದ ಅಪ್ರಾಪ್ತೆ ಬಂಧನ BDA JK_Adv B...
Home Crime ಪ್ರೀತಿ ನಿರಾಕರಿಸಿದ್ದಕ್ಕೆ 2 ತಿಂಗಳ ಮಗುವನ್ನೇ ಕೊಂದ ಅಪ್ರಾಪ್ತೆ ಬಂಧನ

ಪ್ರೀತಿ ನಿರಾಕರಿಸಿದ್ದಕ್ಕೆ 2 ತಿಂಗಳ ಮಗುವನ್ನೇ ಕೊಂದ ಅಪ್ರಾಪ್ತೆ ಬಂಧನ

ಯಾದಗಿರಿ, ಜುಲೈ, 8,2024(www.justkannada.in): ಪ್ರೀತಿ ನಿರಾಕರಿಸಿದ್ದಕ್ಕೆ ಎರಡು ತಿಂಗಳ ಹಸುಗೂಸನ್ನೇ ಕೊಲೆ ಮಾಡಿದ ಅಪ್ರಾಪ್ತೆಯನ್ನು ಯಾದಗಿರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಯಾದಗಿರಿ ನಗರದ ಅಂಬೇಡ್ಕರ್ ಬಡಾವಣೆಯಲ್ಲಿ ನಾಗೇಶ್​, ಚಟ್ಟೆಮ್ಮ ಎಂಬ ದಂಪತಿ ಮಗು ಮೀನಾಕ್ಷಿ ಕೊಲೆಯಾದ ಶಿಶು. ಕೊಲೆ ಮಾಡಿದ ಅಪ್ರಾಪ್ತೆ ಪಕ್ಕದ ಮನೆಯಲ್ಲೇ ವಾಸವಾಗಿದ್ದಳು. ಅಪ್ರಾಪ್ತೆಯು ಕೊಲೆಯಾದ ಶಿಶುವಿನ ಮೀನಾಕ್ಷಿಯು ಚಿಕ್ಕಪ್ಪ ಯಲ್ಲಪ್ಪನನ್ನು ಪ್ರೀತಿಸುತ್ತಿದ್ದಳು. ಆದರೆ ಯಲ್ಲಪ್ಪ, ಅಪ್ರಾಪ್ತೆಯ ಪ್ರೀತಿಯನ್ನ ನಿರಾಕರಿಸಿದ್ದ. ಇದರಿಂದ ಸಿಟ್ಟಿಗೆದ್ದ ಅಪ್ರಾಪ್ತೆಯು ಯಲ್ಲಪ್ಪನ ಮೇಲೆ ಕೊಲೆ ಆರೋಪ ಬರುವಂತೆ ಮಾಡಲು ಸಂಚು ರೂಪಿಸಿ ಯಲ್ಲಪ್ಪನ ಅಣ್ಣನ ಮಗುವನ್ನ ಬಾವಿಗೆ ಎಸೆದು ಕೊಲೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.

ಬಳಿಕ ಮೀನಾಕ್ಷಿಯನ್ನು ಆತನ ಚಿಕ್ಕಪ್ಪನೇ ಕೊಲೆ ಮಾಡಿದ್ದಾನೆಂದು ಬಿಂಬಿಸಲು ಯತ್ನಿಸಿದ್ದಾಳೆ. ಮಗು ಕಾಣದಿದ್ದಾಗ ಪೋಷಕರು ಮಗುವನ್ನು ಹುಡುಕಲು ಆರಂಭಿಸಿದ್ದಾರೆ. ಅವರೊಂದಿಗೆ, ಆರೋಪಿ ಕೂಡ ಮಗುವನ್ನು ಹುಡುಕುವ ನಾಟಕವಾಡಿದ್ದಾಳೆ. ಸ್ವಲ್ಪ ಹೊತ್ತಿನ ಬಳಿಕ ಬಾವಿಯಲ್ಲಿ ನೋಡೋಣ ಎಂದು ಪೋಷಕರಿಗೆ ಹೇಳಿದ್ದಾಳೆ. ಆಗ ಮಗುವಿನ ಪೋಷಕರು ಬಾವಿಯಲ್ಲಿ ನೋಡಿದಾಗ ಮಗುವಿನ ಶವ ಕಂಡಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.ಪ್ರೀತಿ ನಿರಾಕರಿಸಿದ್ದಕ್ಕೆ 2 ತಿಂಗಳ ಮಗುವನ್ನೇ ಕೊಂದ ಅಪ್ರಾಪ್ತೆ ಬಂಧನ arrest

ಈ ವಿಚಾರ ತಿಳಿದ ಯಾದಗಿರಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಸತ್ಯಾಂಶ. ಅಪ್ರಾಪ್ತೆಯನ್ನು ಬಂಧಿಸಿದ್ದಾರೆ. ಈ ಕುರಿತು ಯಾದಗಿರಿ ನಗರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: minor,  killed , 2 month, old baby