Monday, October 12, 2026

Dasara Wishes

BJP DasraWishes_JK DasraWishes JK
Happy Dasara
Home Crime ವಿಚಾರಣೆಗೆ ಹಾಜರಾಗುವಂತೆ ಭವಾನಿ ರೇವಣ್ಣಗೆ SIT ನೋಟಿಸ್.

ವಿಚಾರಣೆಗೆ ಹಾಜರಾಗುವಂತೆ ಭವಾನಿ ರೇವಣ್ಣಗೆ SIT ನೋಟಿಸ್.

ಬೆಂಗಳೂರು,ಮೇ,31,2024 (www.justkannada.in):  ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತ ಮಹಿಳೆಯ ಕಿಡ್ನಾಪ್ ಕೇಸ್ ನಲ್ಲಿ ಭವಾನಿ ರೇವಣ್ಣ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್ ಐಟಿ ನೋಟಿಸ್ ನೀಡಿದೆ.

ಪ್ರಕರಣ ಸಂಬಂಧ ನಾಳೆ ಸಂಜೆ  5ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಭವಾನಿ ರೇವಣ್ಣ ಅವರಿಗೆ ಎಸ್ ಐಟಿ ನೋಟಿಸ್ ನೀಡಿದೆ.

ಇದೇ ವೇಳೆ ನೋಟಿಸ್‌ ನಲ್ಲಿ ಅಧಿಕಾರಿಗಳು ಭವಾನಿ ರೇವಣ್ಣನವರಿಗೆ ಮನೆಯಲ್ಲೇ ಕೂಡ ನೀವು ವಿಚಾರಣೆ  ಎದುರಿಸಲು ಅವಕಾಶ ಪಡೆದುಕೊಳ್ಳಬಹುದು ಎನ್ನಲಾಗಿದ್ದು ಭವಾನಿ ರೇವಣ್ಣ ಕೂಡ ಮನೆಯಲ್ಲಿ ನಾನು ವಿಚಾರಣೆಗೆ ಹಾಜರಾಗುವೆ ಆಂತ ತಿಳಿಸಿದ್ದಾರೆ ಎನ್ನಲಾಗಿದೆ.ವಿಚಾರಣೆಗೆ ಹಾಜರಾಗುವಂತೆ ಭವಾನಿ ರೇವಣ್ಣಗೆ SIT ನೋಟಿಸ್ bhavani revanna

ಇನ್ನು ಭವಾನಿ ರೇವಣ್ಣ ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ಆದೇಶವನ್ನ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಇಂದು ಪ್ರಕಟಿಸಲಿದೆ.

Key words: SIT- notice- Bhavani Revanna – attend – hearing