Saturday, August 15, 2026

BDA Apartments

Home Crime ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ  3 ದಿನ ಪೊಲೀಸ್ ಕಸ್ಟಡಿಗೆ.

ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ  3 ದಿನ ಪೊಲೀಸ್ ಕಸ್ಟಡಿಗೆ.

ಹಾಸನ,ಮೇ,13,2024 (www.justkannada.in):  ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ  ಬಂಧಿತರಾಗಿರುವ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡರನ್ನ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಹೊಳೆನರಸೀಪುರ  ಜೆಎಂಎಫ್ ಸಿ ಕೋರ್ಟ್ ಆದೇಶಿಸಿದೆ.

ಹೊಳೆನರಸಿಪುರ ಠಾಣೆ ಪೊಲೀಸರು ಬಿಜೆಪಿ ಮುಖಂಡ ದೇವರಾಜೇಗೌಡರನ್ನು ಇಂದು ಹೊಳೆನರಸೀಪುರದ ಜೆಎಂಎಫ್ ಸಿ ಕೋರ್ಟ್ ಗೆ ಹಾಜರುಪಡಿಸಿದ್ದರು. ಈ ವೇಳೆ ಹೆಚ್ಚಿನ ವಿಚಾರಣೆಗಾಗಿ ದೇವರಾಜೇಗೌಡರನ್ನು ಕಸ್ಟಡಿಗೆ ನೀಡುವಂತೆ  ಮನವಿ ಮಾಡಿದ್ದರು.

ಪೊಲೀಸರ ಮನವಿ ಪುರಸ್ಕರಿಸಿದ  ಕೋರ್ಟ್  ದೇವರಾಜೇಗೌಡಗೆ ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.  ನಾಳೆ ಬೆಳಿಗ್ಗೆ 9 ಗಂಟೆಯಿಂದ ಮೇ 16ರ ರಾತ್ರಿವರೆಗೆ ದೇವರಾಜೇಗೌಡರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಪ್ರಕರಣ ಸಂಬಂಧ ದೇವರಾಜೇಗೌಡರನ್ನ ಮೇ 11 ರಂದು ಬಂಧಿಸಲಾಗಿತ್ತು.

Key words: BJP, Devaraj Gowda, police custody