Thursday, August 13, 2026

BDA Apartments

Home Front Page ಶಾಸಕರಲ್ಲಿ ಅಸಮಾಧಾನ ಇದೆ: ಆದರೆ ಸರ್ಕಾರ ಉರುಳುವ ಪ್ರಶ್ನೆಯೇ ಇಲ್ಲ- ಸಚಿವ ಸತೀಶ್ ಜಾರಕಿಹೊಳಿ

ಶಾಸಕರಲ್ಲಿ ಅಸಮಾಧಾನ ಇದೆ: ಆದರೆ ಸರ್ಕಾರ ಉರುಳುವ ಪ್ರಶ್ನೆಯೇ ಇಲ್ಲ- ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು,ಮೇ,13,2024 (www.justkannada.in): ಕರ್ನಾಟಕದಲ್ಲಿ ಅಪರೇಷನ್ ಕಮಲ ಕುರಿತು ಮಹಾರಾ‍ಷ್ಟ್ರ ಸಿಎಂ ಏಕನಾಥ ಸಿಂಧೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಶಾಸಕರಲ್ಲಿ ಅಭಿವೃದ್ಧಿ ವಿಚಾರವಾಗಿ ಅಸಮಾಧಾನ ಇರೋದು ನಿಜ. ಆದರೆ ಸರ್ಕಾರ ಉರುಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ,  ಮುಖ್ಯಮಂತ್ರಿ ಹುದ್ದೆ ಕುರಿತಾಗಿ ನಮ್ಮ ನಮ್ಮಲ್ಲೇ ಜಗಳ ಇದೆ. ಅದು ಪಾರ್ಟಿಯಲ್ಲಿ ಇದೆ. ಮಹಾರಾಷ್ಟ್ರಕ್ಕೆ ಕರ್ನಾಟಕವನ್ನು ಹೋಲಿಕೆ ಮಾಡುವುದು ಬೇಡ. ಏಕನಾಥ ಶಿಂಧೆಗೆ ಮಾತನಾಡುವ ಸ್ವಾತಂತ್ರ್ಯವಿದೆ. ಮಾತನಾಡುತ್ತಾರೆ. ಭಿನ್ನಮತ ಇದೆ ಎಂದು ಸರ್ಕಾರ ಬೀಳಿಸಲು ಆಗುತ್ತದೆಯೇ ಎಂದು ಪ್ರಶ್ನಿಸಿದರು.

ಶಾಸಕರ ಅಸಮಾಧಾನ ಇದೆ, ಅದಕ್ಕಾಗಿ ಸರ್ಕಾರ ಬೀಳುವುದಿಲ್ಲ. ಅಭಿವೃದ್ಧಿ, ವರ್ಗಾವಣೆ ವಿಚಾರದಲ್ಲಿ ಸಮಸ್ಯೆಗಳು ಇರುತ್ತವೆ. ಇದಕ್ಕೆಲ್ಲ ಸರ್ಕಾರ ಬೀಳಲ್ಲ. ಇನ್ನೂ 4 ವರ್ಷ ಕಾಂಗ್ರೆಸ್ ಸರ್ಕಾರ ಇರಲಿದೆ. ಸರ್ಕಾರ ಉರುಳುವ ಪ್ರಶ್ನೆಯೇ ಉದ್ಭವಿಸಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

Key words:   government,  Minister, Satish Jarakiholi