Tuesday, August 18, 2026

BDA Apartments

Home Front Page ರಾಜಕೀಯಕ್ಕಾಗಿ ದೇವರಾಜೇಗೌಡರ ಬಂಧನ: ರಾಜ್ಯದಲ್ಲಿ ಹಿಟ್ಲರ್ ಮೀರಿಸೋ ಸರ್ಕಾರ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

ರಾಜಕೀಯಕ್ಕಾಗಿ ದೇವರಾಜೇಗೌಡರ ಬಂಧನ: ರಾಜ್ಯದಲ್ಲಿ ಹಿಟ್ಲರ್ ಮೀರಿಸೋ ಸರ್ಕಾರ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

ಹುಬ್ಬಳ್ಳಿ,ಮೇ,11,2024 (www.justkannada.in): ರಾಜಕೀಯಕ್ಕಾಗಿ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡರನ್ನ ಬಂಧಿಸಿದ್ದಾರೆ. ರಾಜ್ಯದಲ್ಲಿ ಹಿಟ್ಲರ್ ಮೀರಿಸುವ ಸರ್ಕಾರವಿದೆ ಎಂದು ಕೇಂದ್ರ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಪ್ರಹ್ಲಾದ್ ಜೋಶಿ, ರಾಜಕೀಯಕ್ಕಾಗಿ ದೇವರಾಜೇಗೌಡ ಬಂಧನ. ಶಿವಕುಮಾರ್ ಬಗ್ಗೆ ಹೇಳಿದ್ದಕ್ಕೆ ಬಂಧಿಸಿದ್ದಾರೆ. ದೇವರಾಜೇಗೌಡ ಸತ್ಯ ಹೇಳಬಹುದು ಎಂದು  ಅರೆಸ್ಟ್ ಮಾಡಿದ್ದಾರೆ. ಇದು ಸ್ವಾರ್ಥ ರಾಜಕಾರಣ. ವಿರೋಧಿಗಳನ್ನು ಮುಗಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಹಿಟ್ಲರ್ ಮೀರಿಸೋ ಸರ್ಕಾರ ಇದೆ.  ದೇವರಾಜೇಗೌರ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಸರ್ಕಾರದ ಏಜೆಂಟ್ ಆಗಿ ಎಸ್ ಐಟಿ ಕೆಲಸ ಮಾಡುತ್ತಿದ್ದು. ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹರಿಹಾಯ್ದರು.

Key words:  Devarajegowda, arrest,  politics, Prahlad Joshi