Monday, October 12, 2026

Dasara Wishes

BJP DasraWishes_JK DasraWishes JK
Happy Dasara
Home Front Page ಮಿಸ್ಟರ್ ಪರಮೇಶ್ವರ್ ಗೆ ಕೇಳುತ್ತೇನೆ, ಎಸ್ ಐಟಿ ಏನು ಮಾಡುತ್ತಿದೆ..? ಹೆಚ್ ಡಿಕೆ ಕಿಡಿ.

ಮಿಸ್ಟರ್ ಪರಮೇಶ್ವರ್ ಗೆ ಕೇಳುತ್ತೇನೆ, ಎಸ್ ಐಟಿ ಏನು ಮಾಡುತ್ತಿದೆ..? ಹೆಚ್ ಡಿಕೆ ಕಿಡಿ.

ಬೆಂಗಳೂರು,ಮೇ,8,2024 (www.justkannada.in):  ಮಿಸ್ಟರ್ ಪರಮೇಶ್ವರ್ ಗೆ ಕೇಳುತ್ತೇನೆ. ಪೆನ್ ಡ್ರೈವ್ ಪ್ರಕರಣದಲ್ಲಿ ಎಸ್ ಐಟಿ ಏನು ಮಾಡುತ್ತಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾ,ಮಿ ಕಿಡಿಕಾರಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಹೆಣ್ಣುಮಕ್ಕಳ ಪೆನ್ ಡ್ರೈವ್ ಬಿಡುಗಡೆಯಾಗಿದೆ ಇದಕ್ಕೆ ಯಾರು ಕಾರಣ  ಅನ್ನೋದು ತನಿಖೆಯಾಗಬೇಕು ಎಂದು  ಮಹಿಳಾ ಆಯೋಗ ಹೇಳಿದೆ. ಪೆನ್ ಡ್ರೈವ್ ಪ್ರಕರಣದಲ್ಲಿ ಎಸ್ ಐಟಿ ಏನು ಮಾಡುತ್ತಿದೆ. ಮಿಸ್ಟರ್ ಪರಮೇಶ್ವರ್ ಗೆ ನಾನು ಕೇಳುತ್ತೇನೆ. ರೇವಣ್ಣ, ಪ್ರಜ್ವಲ್ ರೇವಣ್ಣ ಇವರ ಟಾರ್ಗೆಟ್. ಕಾರ್ತಿಕ್ ಗೌಡಗೆ ಟ್ರೈನ್ ಅಪ್ ಮಾಡ್ತಾ ಇದ್ದಾರೆ ಎಂದು ಹರಿಹಾಯ್ದರು.

ಇದೇ ವೇಳೆ ಕಾರ್ತಿಕ್ ಗೌಡ ವಿರುದ್ದ ಆಕ್ರೋಶ ಹೊರ ಹಾಕಿದ ಹೆಚ್ ಡಿಕೆ, ಯಾರ ಬಳಿ ಎಷ್ಟು ದುಡ್ಡು ತೆಗೆದುಕೊಂಡಿದ್ದಿಯಾ..? 14 ವರ್ಷ ಕಾರ್ತಿಕ್ ಪ್ರಜ್ವಲ್ ಬಳಿ ಏಕೆ ಕೆಲಸ ಮಾಡಿದ್ದ ಕಲ್ಲು ಬಂಡೆಯೂ ಕಾನೂನಿಗೆ ತಲೆಬಾಗಬೇಕು ಎಂದು ವಾಗ್ದಾಳಿ ನಡೆಸಿದರು.

Key words: Mr. Parameshwar, SIT, pendrive, case, HDK