Monday, October 5, 2026

BDA Apartments

ನಾಡು ಕಂಡ ಶ್ರೇಷ್ಠ ಮುತ್ಸದ್ಧಿ ರಾಜಕಾರಣಿ ಎಸ್.ಎಂ ಕೃಷ್ಣ: ಅವರ ಆಡಳಿತ ವೈಖರಿ ರ...
Home Crime ಹೆಚ್.ಡಿ ರೇವಣ್ಣ ನಿವಾಸಕ್ಕೆ SIT ಅಧಿಕಾರಿಗಳು ಭೇಟಿ, ಸ್ಥಳ ಮಹಜರು.

ಹೆಚ್.ಡಿ ರೇವಣ್ಣ ನಿವಾಸಕ್ಕೆ SIT ಅಧಿಕಾರಿಗಳು ಭೇಟಿ, ಸ್ಥಳ ಮಹಜರು.

ಹಾಸನ,ಮೇ,4, 2024 (www.justkannada.in): ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಶಾಸಕ ಹೆಚ್.ಡಿ ರೇವಣ್ಣ ನಿವಾಸಕ್ಕೆ ಎಸ್ ಐಟಿ ಅಧಿಕಾರಿಗಳು ಭೇಟಿ ನೀಡಿದ್ದು ಸಂತ್ರಸ್ತ ಮಹಿಳೆಯೊಂದಿಗೆ ಸ್ಥಳ ಮಹಜರು ನಡೆಸಿದ್ದಾರೆ.

ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಹೆಚ್. ಡಿ. ರೇವಣ್ಣ ಅವರ ನಿವಾಸಕ್ಕೆ ಎಸ್ ಐಟಿ ಅಧಿಕಾರಿಗಳು ಐದು ವಾಹನಗಳಲ್ಲಿ ಭೇಟಿ ನೀಡಿದ್ದು, ಸ್ಥಳ ಮಹಜರು ನಡೆಸಿದ್ದಾರೆ. ಸಂತ್ರಸ್ತ ಮಹಿಳೆಯನ್ನೂ ಜೊತೆಗೆ ಕರೆದುಕೊಂಡು ಬಂದು ಎಸ್ ಐಟಿ ಅಧಿಕಾರಿಗಳು ಹೆಚ್.ಡಿ ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು ನಡೆಸಿದ್ದಾರೆ.   ಎಸ್ ಐಟಿ ಅಧಿಕಾರಿಗಳಿಗೆ ಸ್ಥಳೀಯ ಪೊಲೀಸರು ಸಾಥ್ ನೀಡಿದ್ದಾರೆ.ಹೆಚ್.ಡಿ ರೇವಣ್ಣ ನಿವಾಸಕ್ಕೆ SIT ಅಧಿಕಾರಿಗಳು ಭೇಟಿ, ಸ್ಥಳ ಮಹಜರು hd revanna

ಹೆಚ್ ಡಿ ರೇವಣ್ಣರಿಂದ ಲೈಂಗಿಕ ಕಿರುಕುಳ ಎಂದು ಆರೋಪಿಸಿ ಸಂತ್ರಸ್ತ ಮಹಿಳೆ ದೂರು ದಾಖಲಿಸಿದ್ದರು. ಇನ್ನು ಸ್ಥಳ ಮಹಜರು ಪ್ರಕ್ರಿಯೆಯನ್ನ ಅಧಿಕಾರಿಗಳು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ.

Key words: SIT, officers, visited, HD Revanna, residence