Saturday, August 15, 2026

BDA Apartments

Home Front Page ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಲು ನಾವು ಕೂಡ ಅನುಮತಿ ನೀಡಿಲ್ಲ-ವಿದೇಶಾಂಗ ಸಚಿವಾಲಯ ಸ್ಪಷ್ಟನೆ.

ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಲು ನಾವು ಕೂಡ ಅನುಮತಿ ನೀಡಿಲ್ಲ-ವಿದೇಶಾಂಗ ಸಚಿವಾಲಯ ಸ್ಪಷ್ಟನೆ.

ನವದೆಹಲಿ,ಮೇ,2,2024 (www.justkannada.in): ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಲು ನಾವು ಕೂಡ ಅನುಮತಿ ನೀಡಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಪ್ರಜ್ವಲ್ ರೇವಣ್ಣ ವಿದೇಶಕ್ಕೆ  ತೆರಳಲು ನಾವು ಕೂಡ ಅನುಮತಿ ನೀಡಿಲ್ಲ.  ಇಲಾಖೆಯಿಂದ ಯಾವದೇ ವೀಸಾ ನೋಟ್ ಕೂಡ ನೀಡಿಲ್ಲ. ಜರ್ಮನಿಗೆ ಪ್ರಯಾಣಿಸಲು ಸಚಿವಾಲಯವು ವೀಸಾ ಟಿಪ್ಪಣಿ ನೀಡಿಲ್ಲ. ರಾಜತಾಂತ್ರಿಕ ಪಾಸ್ ಪೋರ್ಟ್ ನಲ್ಲಿ ರೇವಣ್ಣ ತೆರಳಿದ್ದಾರೆ ಎಂದು ತಿಳಿಸಿದ್ದಾರೆ.

ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದ್ದು ಈ ಬೆನ್ನಲ್ಲೆ ಜರ್ಮನಿ ದೇಶಕ್ಕೆ ತೆರಳಿದ್ದಾರೆ. ಪ್ರಕರಣವನ್ನ ಎಸ್ ಐಟಿ ತನಿಖೆಗೆ ನೀಡಲಾಗಿದೆ. ಈ ಮಧ್ಯೆ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.

Key words:  Prajwal Revanna, abroad, Ministry,  External Affairs