Sunday, August 23, 2026

BDA Apartments

Home Election 2024 ದೇಶದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅನಿವಾರ್ಯ- ಶೋಭಾ ಕರಂದ್ಲಾಜೆ.

ದೇಶದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅನಿವಾರ್ಯ- ಶೋಭಾ ಕರಂದ್ಲಾಜೆ.

ದಾವಣಗೆರೆ,ಮೇ,2,2024 (www.justkannada.in): ದೇಶದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅನಿವಾರ್ಯ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನುಡಿದರು.

ದಾವಣಗೆರೆಯ ಹರಪನಹಳ್ಳಿಯಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, ದೇಶದ ಅಭಿವೃದ್ದಿಗೆ ಪ್ರಧಾನಿ ಮೋದಿ ಅನಿವಾರ್ಯ. ಲಕ್ಷಾಂತರ ಗ್ರಾಮಗಳಿಗೆ  ಪ್ರಧಾನಿ ಮೋದಿ ಅವರು ವಿದ್ಯುತ್ ಪೂರೈಸಿದ್ದಾರೆ.  ಇದೇ ಕಾರಣಕ್ಕೆ ದೇಶದ ಬಡವರಿಗೆ ಮೋದಿ ಬೇಕು.  ಮೋದಿ ಎದುರು ರಾಹುಲ್ ಗಾಂಧಿ,  ಮಮತಾ ಬ್ಯಾನರ್ಜಿ, ಸ್ಟ್ಯಾಲಿನ್,   ಯಾರೂ ನಾಯಕರೇ ಅಲ್ಲ ಎಂದು ಲೇವಡಿ ಮಾಡಿದರು.

Key words:  PM Modi, indispensable, country, Shobha Karandlaje