Sunday, September 27, 2026

BDA Apartments

Home Front Page ಕರ್ನಾಟಕದಲ್ಲಿ ರಾಕ್ಷಸೀ ಕೃತ್ಯ ನಡೆದಿದೆ:  ಈ ಬಗ್ಗೆ ಮೋದಿ ಮಾತನಾಡಲ್ಲ- ಪ್ರಿಯಾಂಕಾ ಗಾಂಧಿ ವಾಗ್ದಾಳಿ.

ಕರ್ನಾಟಕದಲ್ಲಿ ರಾಕ್ಷಸೀ ಕೃತ್ಯ ನಡೆದಿದೆ:  ಈ ಬಗ್ಗೆ ಮೋದಿ ಮಾತನಾಡಲ್ಲ- ಪ್ರಿಯಾಂಕಾ ಗಾಂಧಿ ವಾಗ್ದಾಳಿ.

ಕಲಬುರುಗಿ,ಏಪ್ರಿಲ್, 29,2024 (www.justkannada.in):  ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣವನ್ನ ಪ್ರಸ್ತಾಪಿಸಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕದಲ್ಲಿ ಸಾವಿರಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ . ಕರ್ನಾಟಕದಲ್ಲಿ ರಾಕ್ಷಸೀ ಕೃತ್ಯ ನಡೆದಿದೆ.  ಆದರೆ ಈ ಬಗ್ಗೆ ಪ್ರಧಾನಿ ಮೋದಿ ಮಾತನಾಡಲ್ಲ ಎಂದು ಪ್ರಿಯಾಂಕಾ ಗಾಂಧಿ ಹರಿಹಾಯ್ದರು.

ಕಲಬುರುಗಿ ಸೇಡಂ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಕರ್ನಾಟಕದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದೆ. ಒಬ್ಬ ರಾಕ್ಷಸ ದೇಶಬಿಟ್ಟು ಓಡಿ ಹೋಗಿದ್ದಾನೆ. ಇಂತವರ ಪರ ಮೋದಿ ಮತಯಾಚನೆ ಮಾಡಿದ್ದಾರೆ. ಇದಕ್ಕೆ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.ಕರ್ನಾಟಕದಲ್ಲಿ ರಾಕ್ಷಸೀ ಕೃತ್ಯ ನಡೆದಿದೆ priyanka

ಮೋದಿ ಬರೀ ಸುಳ್ಳು ಹೇಳುತ್ತಾರೆ. ದೇಶದಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ. ಯುವಕರು ವಲಸೆ ಹೋಗುತ್ತಿದ್ದಾರೆ. ಕಳೆದ 10 ವರ್ಷದಿಂದಲೂ ಉದ್ಯೋಗ ಸೃಷ್ಠಿ ಮಾಡಿಲ್ಲ. ನೋಟ್ ಬ್ಯಾನ್ ಜಿಎಸ್ ಟಿಯಿಂದ ಜನರು ಸಾಕಷ್ಟು ನೊಂದಿದ್ದಾರೆ.  ಸರ್ಕಾರಿ ಹುದ್ದೆಗಳ ಭರ್ತಿಗೆ ಕೇಂದ್ರ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು.

Key words:  Modi-kalburgi-congress- Priyanka Gandhi