Thursday, August 13, 2026

BDA Apartments

Home Election 2024 ನಮ್ಮ ದೇಶವನ್ನ ಕಾಂಗ್ರೆಸ್ ಕೈಗೆ ಕೊಡೋದು ಬೇಡ: ಅಭಿವೃದ್ದಿಗಾಗಿ ಬಿಜೆಪಿಗೆ ಮತನೀಡಿ- ಪ್ರಧಾನಿ ಮೋದಿ ಮನವಿ.

ನಮ್ಮ ದೇಶವನ್ನ ಕಾಂಗ್ರೆಸ್ ಕೈಗೆ ಕೊಡೋದು ಬೇಡ: ಅಭಿವೃದ್ದಿಗಾಗಿ ಬಿಜೆಪಿಗೆ ಮತನೀಡಿ- ಪ್ರಧಾನಿ ಮೋದಿ ಮನವಿ.

ಬಾಗಲಕೋಟೆ,ಏಪ್ರಿಲ್,29,2024 (www.justkannada.in): ದೇಶದಲ್ಲಿ 70 ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್ ಅಭಿವೃದ್ದಿ ಮಾಡಲಿಲ್ಲ. ಈಗ ಮತ್ತೆ ನಮ್ಮ ದೇಶವನ್ನ ಕಾಂಗ್ರೆಸ್ ಕೈಗೆ ಕೊಡೋದು ಬೇಡ. ದೇಶದ ಅಭಿವೃದ್ದಿಗಾಗಿ ಬಿಜೆಪಿಗೆ ಮತ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದರು.

ಬಾಗಲಕೋಟೆಯಲ್ಲಿ ಇಂದು ನಡೆದ ಬಿಜೆಪಿ ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ,  ಮೋದಿ ಕನಸು ಕ್ಲಿಯರ್ ಆಗಿದೆ. 24 ಗಂಟೆಗಳ ಕಾಲ ಬಿಜೆಪಿ ಕೆಲಸ ಮಾಡುತ್ತಿದೆ. ಮೋದಿಯನ್ನ ಭದ್ರಗೊಳಿಸೋ ಶಕ್ತಿ ನಿಮ್ಮ ಮತಕ್ಕಿದೆ. ವಿಕಸಿತ ಭಾರತಕ್ಕಾಗಿ ಬಿಜೆಪಿಗೆ ನೀವು ಮತ ನೀಡಿ. ದೇಶದ ಅಭಿವೃದ್ದಿಗೆ ಬಿಜೆಪಿಗೆ ಮತನೀಡಿ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಸರ್ಕಾರದಲ್ಲಿ ಯಾವ ಹಣವೂ ಫಲಾನುಭವಿಗಳ ಕೈಗೆ ಬೇಗ ಸಿಗುತ್ತಿಲ್ಲ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಖಜಾನೆ ಖಾಲಿಯಾಗದೆ. ಸರ್ಕಾರಿ ನೌಕರರಿಗೂ ಸಂಬಳ ನೀಡಲು ದುಡ್ಡಿಲ್ಲ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕರ್ನಾಟಕದಲ್ಲಿ ಲೂಟಿ ಗ್ಯಾಂಗ್ ಹೆಚ್ಚಾಗಿದೆ. ಕರ್ನಾಟಕವನ್ನು ಲೂಟಿ ಮಾಡುತ್ತಿರುವವರಿಗೆ ಶಿಕ್ಷೆಯಾಗಬೇಕು. ರಾಜ್ಯದಲ್ಲಿ ಟ್ಯಾಂಕರ್ ಮಾಫಿಯ ನಡೆಯುತ್ತಿದೆ. ಭ್ರಷ್ಟಾಚಾರಿಗಳಿಗೆ ಶಿಕ್ಷೆ ಆಗಬೇಕೋ ಬೇಡವೋ..?  ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ಪಾಠ ಕಲಿಸಬೇಕಿದೆ. ಮೇ 7 ರಂದು ಕಾಂಗ್ರೆಸ್ ಪಕ್ಷಕ್ಕೆ ಶಿಕ್ಷೆ ಕೊಡಿ ಎಂದರು.

ಕಾಂಗ್ರೆಸ್ ದೇಶದಲ್ಲಿ 70 ವರ್ಷ ಅಧಿಕಾರದಲ್ಲಿದ್ದಾಗ ಅಭಿವೃದ್ದಿ ಮಾಡಲಿಲ್ಲ. ಹೀಗಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಸ್ವಚ್ಛ ಮಾಡಬೇಕಿದೆ.  ಹುಡುಕಿ ಹುಡುಕಿ ಕಾಂಗ್ರೆಸ್ ಅನ್ನು ಸ್ವಚ್ಛ ಮಾಡಬೇಕು. ಬಡತನ ನಿರ್ಮೂಲನೆ ಮಾಡ್ತೇವೆ ಎಂದು ಅಬ್ಬರಿಸುತ್ತಿದ್ದಾರೆ. ಇಷ್ಟು ವರ್ಷ ಆಡಳಿತ ನಡೆಸಿದರೂ ಬಡತನ ಹೋಗಲಾಡಿಸಲು ಅವರ ಕೈಯಲ್ಲಿ ಆಗಲಿಲ್ಲ ಎಂದು ಕುಟುಕಿದರು.

Key words: PM, Narendra Modi, Congress