Thursday, August 13, 2026

BDA Apartments

Home Election 2024 ಗಲಭೆಯಾಗಿದ್ದ ಇಂಡಿಗನತ್ತ ಗ್ರಾಮದ ಮತಗಟ್ಟೆಯಲ್ಲಿ ಏ.29ರಂದು ಮರು ಮತದಾನ.

ಗಲಭೆಯಾಗಿದ್ದ ಇಂಡಿಗನತ್ತ ಗ್ರಾಮದ ಮತಗಟ್ಟೆಯಲ್ಲಿ ಏ.29ರಂದು ಮರು ಮತದಾನ.

ಚಾಮರಾಜನಗರ, ಏಪ್ರಿಲ್,  27,2024 (www.justkannada.in): ನಿನ್ನೆ ರಾಜ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನದ ವೇಳೆ  ಮತದಾನ ಬಹಿಷ್ಕರಿಸಿ ಗಲಭೆ ನಡೆದಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದ ಒಂದು ಮತಗಟ್ಟೆಯಲ್ಲಿ ಏಪ್ರಿಲ್ 29 ರಂದು ಮರುಮತದಾನ ನಡೆಯಲಿದೆ.

ಇಂಡಿಗನತ್ತ ಗ್ರಾಮದ ಬೂತ್ ನಂಬರ್ 146ರಲ್ಲಿ ಏಪ್ರಿಲ್ 29ರಂದು ಸೋಮವಾರ ಮರು ಮತದಾನ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮರು ಮತದಾನ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ನಿನ್ನೆ ಇಂಡಿಗನತ್ತ ಗ್ರಾಮದ ಗ್ರಾಮಸ್ಥರು ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಮತದಾನ ಬಹಿಷ್ಕರಿಸಿದ್ದರು. ಈ ವೇಳೆ ಗ್ರಾಮಸ್ಥರ ಮನವೊಲಿಸಲು ಬಂದಿದ್ದಅಧಿಕಾರಿಗಳ ಜೊತೆ ಮಾತಿನ ಚಕಮಕಿ ಉಂಟಾಗಿ ರೊಚ್ಚಿಗೆದ್ದ ಗ್ರಾಮಸ್ಥರು ಇವಿಎಂ, ಕುರ್ಚಿ ಮೇಜು ಎಲ್ಲವನ್ನೂ ಪೀಸ್ ಪೀಸ್ ಮಾಡಿದ್ದರು.  ಈ ಸಮಯದಲ್ಲಿ ಪೊಲೀಸರು ಲಾಠಿಚಾರ್ಜ್ ಮಾಡಿದ್ದು ಪೊಲೀಸರ ಮೇಲೆಯೇ ಗ್ರಾಮಸ್ಥರು ಕಲ್ಲು ತೂರಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

Key words: Re-voting – Indiganatta -village – riot