Sunday, September 13, 2026

BDA Apartments

Home Front Page ನನ್ನ ಜಮೀನಿನಲ್ಲಿ ಬಂಡೆ ಒಡೆದು ಬದುಕಿದ್ದೇನೆ-ಹೆಚ್.ಡಿಕೆಗೆ ಡಿಕೆ ಶಿವಕುಮಾರ್ ತಿರುಗೇಟು.

ನನ್ನ ಜಮೀನಿನಲ್ಲಿ ಬಂಡೆ ಒಡೆದು ಬದುಕಿದ್ದೇನೆ-ಹೆಚ್.ಡಿಕೆಗೆ ಡಿಕೆ ಶಿವಕುಮಾರ್ ತಿರುಗೇಟು.

ಬೆಂಗಳೂರು,ಏಪ್ರಿಲ್,16,2024 (www.justkannada.in): ಕಲ್ಲು ಬಂಡೆ ಒಡೆದು ಕದ್ದು ವಿದೇಶಕ್ಕೆ ಮಾರೋದೆ ಸಾಧನೆ ಎಂದು ಆರೋಪಿಸಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್,  ನನ್ನ ಜಮೀನಿನ ಬಂಡೆ ಒಡೆದು ಬದುಕಿದ್ದೇನೆ.  ನನ್ನ ಆಸ್ತಿ ನನ್ನ ಬಂಡೆ ಇದೆಲ್ಲ ಚರ್ಚೆ ಯಾಕೆ..?  ಕುಮಾರಸ್ವಾಮಿ ಏನೇ ಅಂದ್ರು ತಡೆದುಕೊಂಡೆ.  ಯಾವುದೋ ಹೆಣ್ಣುಮಕ್ಕಳ ಜಮೀನು ಬರೆಸಿಕೊಂಡೆ ಅಂದ್ರು.ನನ್ನ ಜಮೀನಿನಲ್ಲಿ ಬಂಡೆ ಒಡೆದು ಬದುಕಿದ್ದೇನೆ dks-dk-shivakumar dks dk shivakumar

ಹೆಚ್ ಡಿಕೆ ನನ್ನ ಸವಾಲು ಸ್ವೀಕರಿಸದಿದ್ರೆ ಬಿಡೋಣ.  ಚುನಾವಣೆ ನಂತರ ಅಸೆಂಬ್ಲಿಯಲ್ಲಿ ನೋಡೋಣ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು.

Key words:  DCM-DK Shivakumar- Former CM-HD Kumaraswamy