Saturday, September 19, 2026

BDA Apartments

ಮಹಿಳೆಯರ ಬಗ್ಗೆ ಹೇಳಿಕೆ ವಿವಾದ: ಹೆಚ್ ಡಿಕೆ ಪರ ನಿಂತ ಶೋಭಾ ಕರಂದ್ಲಾಜೆ BDA JK_Adv BDA Adv
Home Front Page ಮಹಿಳೆಯರ ಬಗ್ಗೆ ಹೇಳಿಕೆ ವಿವಾದ: ಹೆಚ್ ಡಿಕೆ ಪರ ನಿಂತ ಶೋಭಾ ಕರಂದ್ಲಾಜೆ

ಮಹಿಳೆಯರ ಬಗ್ಗೆ ಹೇಳಿಕೆ ವಿವಾದ: ಹೆಚ್ ಡಿಕೆ ಪರ ನಿಂತ ಶೋಭಾ ಕರಂದ್ಲಾಜೆ

ಬೆಂಗಳೂರು,ಏಪ್ರಿಲ್,15,2024 (www.justkannada.in): ಗ್ಯಾರಂಟಿ ಯೋಜನೆಯಿಂದ  ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರೆ ಎಂದು ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ಪರ ಕೇಂದ್ರ ಸಚಿವೆ ಹಾಗೂ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂಧ್ಲಾಜೆ ನಿಂತಿದ್ದಾರೆ.

ಈ ಕುರಿತು ಮಾತನಾಡಿರುವ ಶೋಭಾ ಕರಂದ್ಲಾಜೆ ಅವರು, ಹೆಚ್. ಡಿ ಕುಮಾರಸ್ವಾಮಿ ಅವರಿಗೆ ಮಹಿಳೆಯರ  ಬಗ್ಗೆ ಗೌರವವಿದೆ. ಆದರೆ ಅವರ ಹೇಳಿಕೆ ತಿರುಚುವ ಕೆಲಸವನ್ನ ಕಾಂಗ್ರೆಸ್ ಮಾಡುತ್ತಿದೆ. ನೂರು ಸುಳ್ಳು ಹೇಳಿ ಸತ್ಯ ಮಾಡುವ ಚಾಳಿ ಅವರದ್ದು ಎಂದು ಕಿಡಿಕಾರಿದರು.ಮಹಿಳೆಯರ ಬಗ್ಗೆ ಹೇಳಿಕೆ ವಿವಾದ hdk-shobha karandajle hdk shobha karandajle

ಕಾಂಗ್ರೆಸ್ ಗೆ ಚುನಾವಣೆಗೆ ಒಂದು ವಿಷಯ ಸಿಗಬೇಕು  ವಿಚಾರ ಸಿಗದಿದ್ದಕ್ಕೆ ತಿರುಗಿ ಮುರುಗಿ ಹೇಳಿಕೆ ಕೊಡುತ್ತಿದೆ ಎಂದು ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.

Key words: statements, women,  HDK, Shobha Karandlaje