Sunday, September 6, 2026

BDA Apartments

Home Front Page ಸಿದ್ದರಾಮಯ್ಯ ಭೇಟಿ ಸಂತೋಷ ಆಯ್ತು ಎಂದ ಶ್ರೀನಿವಾಸ್ ಪ್ರಸಾದ್: ನಾಳೆ ಮೋದಿ ಸಮಾವೇಶಕ್ಕೆ ಹೋಗ್ತಾರಾ..?

ಸಿದ್ದರಾಮಯ್ಯ ಭೇಟಿ ಸಂತೋಷ ಆಯ್ತು ಎಂದ ಶ್ರೀನಿವಾಸ್ ಪ್ರಸಾದ್: ನಾಳೆ ಮೋದಿ ಸಮಾವೇಶಕ್ಕೆ ಹೋಗ್ತಾರಾ..?

ಮೈಸೂರು,ಏಪ್ರಿಲ್, 13,2024 (www.justkannada.in): ಸಿಎಂ ಸಿದ್ದರಾಮಯ್ಯ ಮನೆಗೆ ಬಂದಿದ್ದು ಸಂತೋಷ ಆಗಿದೆ. ಸಿದ್ದರಾಮಯ್ಯ ಜೊತೆ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದರು.

ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ  ವಿ.ಶ್ರೀನಿವಾಸ್ ಪ್ರಸಾದ್, ನಾಳೆಯ ಮೋದಿ ಸಮಾವೇಶಕ್ಕೆ ಆಹ್ವಾನ ಬಂದಿಲ್ಲ, ಬರುವುದು ಇಲ್ಲ.  ಬಂದಿಲ್ಲ, ಕರೆದಿಲ್ಲ, ಕರೆಯೋದು ಇಲ್ಲ, ನಾನು ಹೋಗೋದು ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಜೊತೆ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಅವರ ಭೇಟಿ ನನಗೆ ಸಹಜವಾಗಿ ಖುಷಿ ಕೊಟ್ಟಿದೆ. ಅವರು ನನ್ನ ಬೆಂಬಲ ಕೇಳಿದ್ದಾರೆ. ನಾನು ರಾಜಕೀಯ ನಿವೃತ್ತಿಯಾಗಿದ್ದೇನೆ ಅಂತ ಹೇಳಿದ್ದೇನೆ ಅಷ್ಟೆ. ಚಾಮರಾಜನಗರದಲ್ಲಿ ಕಾಂಗ್ರೆಸ್ ಗೆ ಉತ್ತಮವಾದ ವಾತಾವರಣ ಇದೆ. ನಾನು ರಾಜಕೀಯ ನಿವೃತ್ತಿ ತೆಗೆದುಕೊಂಡಿದ್ದೇನೆ. ಬಹಿರಂಗವಾಗಿ ಯಾವುದೇ ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಿಲ್ಲ ಎಂದರು.

ನಂತರ ಸಿಎಂ ಸಿದ್ದರಾಮಯ್ಯ ಮಾತನಾಡಿ,  ಶ್ರೀನಿವಾಸ್ ಪ್ರಸಾದ್ ನಾನು ಬಹಳ ದೀರ್ಘಕಾಲದ ಸ್ನೇಹಿತರು. ರಾಜಕೀಯದಲ್ಲಿ ಅವರು ಬಿಜೆಪಿಗೆ ಹೋದರು ನಾನು ಕಾಂಗ್ರೆಸ್ ನಲ್ಲಿದ್ದೆ. ಈಗ ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ.  ಹಾಗಾಗಿ ಅವರ ಆರೋಗ್ಯ ವಿಚಾರಿಸಿಸೋಣ ಅಂತಾ  ಬಂದಿದ್ದೆ. ರಾಜಕೀಯವಾಗಿ ಏನೂ ಪ್ರಸ್ತಾಪ ಮಾಡಲಿಲ್ಲ. ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡಿ ನಾನು ಯಾರ ಪರವಾಗಿಯೂ ನಾನು ಪ್ರಚಾರಕ್ಕೆ ಹೋಗಲ್ಲ ,ಯಾರ ಪರ, ವಿರೋಧವು ಮಾತನಾಡಲ್ಲ ಅಂತ ಹೇಳಿದ್ದಾರೆ. ಹಾಗಾಗಿ ರಾಜಕೀಯ ಚರ್ಚೆ ಏನೂ ಮಾಡಲಿಲ್ಲ. ನೀವು ಕಾಂಗ್ರೆಸ್ ನಲ್ಲಿದ್ದವರು ನಿಮ್ಮ ಸಿಂಪತಿ ಕಾಂಗ್ರೆಸ್ ಮೇಲಿರಲಿ ಎಂದು ಮನವಿ ಮಾಡಿದ್ದೇನೆ ಅಷ್ಟೇ ಎಂದರು.

Key words: Shrinivas Prasad, happy, Siddaramaiah