Sunday, September 6, 2026

BDA Apartments

Home Crime ಕೆಲಸ ಮಾಡುವ ವೇಳೆ ಹುಲಿ ದಾಳಿ: ಯುವಕನ ಸ್ಥಿತಿ ಗಂಭೀರ.

ಕೆಲಸ ಮಾಡುವ ವೇಳೆ ಹುಲಿ ದಾಳಿ: ಯುವಕನ ಸ್ಥಿತಿ ಗಂಭೀರ.

ಚಾಮರಾಜನಗರ, ಏಪ್ರಿಲ್,13, 2024 (www.justkannada.in): ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ  ಯುವಕನ  ಮೇಲೆ ಹುಲಿ ದಾಳಿ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹೊನ್ನೇಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬಂಡಿಪುರದ ಕಾಡಂಚಿನ ಗ್ರಾಮವಾದ ಹೊನ್ನೇಗೌಡನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮನು(27) ಹುಲಿ ದಾಳಿಗೆ ಒಳಗಾಗಿ ಗಂಭೀರವಾಗಿ ಗಾಯಗೊಂಡ ಯುವಕ.  ಸದ್ಯ ಯುವಕ ಮನು ಪ್ರಾಣಪಾಯದಿಂದ ಪಾರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೆಲಸ ಮಾಡುತ್ತಿದ್ದ ವೇಳೆ ಹುಲಿ ದಾಳಿ ನಡೆಸಿದ್ದು ಅಕ್ಕಪಕ್ಕದಲ್ಲಿದ ಜನ ಚಿರಾಟದಿಂದ ಹುಲಿ ಕಾಲ್ಕಿತ್ತಿದೆ. ಗಾಯಾಳು ಮನುಗೆ  ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗ್ರಾಮದ ವೃಷಬೇಂದ್ರಪ್ಪ ಎಂಬುವ ಬಾಳೆ ತೋಟದಲ್ಲಿ ಹುಲಿ ಕಾಣಿಕೊಂಡಿದ್ದು ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದಾರೆ. ಹುಲಿ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ.

Key words: Tiger, attack , Chamaraja nagar