Wednesday, August 12, 2026

BDA Apartments

Home Front Page ತಾಕತ್ತಿದ್ರೆ  ನಿಮ್ಮ ಮುಂದಿನ ಸಿಎಂ, ಮುಂದಿನ ಪಿಎಂ ಯಾರೇಂದು ಹೇಳಿ-ಬಿಎಸ್ ವೈಗೆ ಲಕ್ಷ್ಮಣ್ ಸವದಿ ಸವಾಲು.

ತಾಕತ್ತಿದ್ರೆ  ನಿಮ್ಮ ಮುಂದಿನ ಸಿಎಂ, ಮುಂದಿನ ಪಿಎಂ ಯಾರೇಂದು ಹೇಳಿ-ಬಿಎಸ್ ವೈಗೆ ಲಕ್ಷ್ಮಣ್ ಸವದಿ ಸವಾಲು.

ಬೆಂಗಳೂರು,ಏಪ್ರಿಲ್,11,2024 (www.justkannada.in): ತಾಕತ್ತಿದ್ರೆ ಕಾಂಗ್ರೆಸ್ ತಮ್ಮ ಪ್ರಧಾನಿ ಅಭ್ಯರ್ಥಿ ಯಾರೆಂದು ಘೋಷಿಸಲಿ ಎಂದು ಹೇಳಿದ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಸವಾಲು ಹಾಕಿದ್ದಾರೆ.

ಈ ಕುರಿತು ಮಾತನಾಡಿರುವ ಲಕ್ಷ್ಮಣ್ ಸವದಿ, ನಿಮಗೆ ತಾಕತ್ ಇದ್ರೆ ರಾಜ್ಯದ  ನಿಮ್ಮ ಮುಂದಿನ ಸಿಎಂ ಅಭ್ಯರ್ಥಿ ಯಾರೆಂದು ಹೇಳಿ, ಮೋದಿ ನಂತರ ನಿಮ್ಮ ಪ್ರಧಾನಿ ಅಭ್ಯರ್ಥಿ ಯಾರೆಂದು ಬಹಿರಂಗಪಡಿಸಿ ಎಂದು  ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪಗೆ ಸವಾಲ್ ಹಾಕಿದ್ದಾರೆ.

ಈ ವಯಸ್ಸಿನಲ್ಲಿ ಸವಾಲ್ ಹಾಕಿದ್ದೀರಾ..? ನಿಮಗೆ ತಾಕತ್ ಇದ್ರೆ ರಾಜ್ಯದ ಮುಂದಿನ ಸಿಎಂ ಯಾರೆಂದು ಹೇಳಿ..? ತಾಕತ್ ಇದ್ರೆ ಮೋದಿ ಬಳಿಕ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಿ..? ಬೇರೆ ಪಕ್ಷದವರನ್ನು ಕೇಳುವ ನೈತಿಕತೆ ನಿಮಗಿಲ್ಲ ಎಂದು ಶಾಸಕ ಲಕ್ಷ್ಮಣ್ ಸವದಿ  ಟಾಂಗ್ ಕೊಟ್ಟಿದ್ದಾರೆ.

Key words:   Laxman Savadi, challenge, BSY