Wednesday, August 12, 2026

BDA Apartments

Home Election 2024 ನಾಳೆ ನಾಮಪತ್ರ ಸಲ್ಲಿಕೆ: ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತಿಲ್ಲ- ಕೆಎಸ್ ಈಶ್ವರಪ್ಪ.

ನಾಳೆ ನಾಮಪತ್ರ ಸಲ್ಲಿಕೆ: ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತಿಲ್ಲ- ಕೆಎಸ್ ಈಶ್ವರಪ್ಪ.

 ಶಿವಮೊಗ್ಗ,ಏಪ್ರಿಲ್,11,2024 (www.justkannada.in): ನಾನು ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಯಾವುದೇ ಕಾರಣಕ್ಕೂ ಹಿಂದೇ  ಸರಿಯುವ ಮಾತೇ ಇಲ್ಲ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ನುಡಿದರು.

ಈ ಕುರಿತು ಇಂದು ಮಾತನಾಡಿದ ಕೆ.ಎಸ್ ಈಶ್ವರಪ್ಪ, ನಾಳೆ ಪಕ್ಷೇತರ  ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ. ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ. ಹಿಂದೂ ಕಾರ್ಯಕರ್ತರು ಎಲ್ಲಾ ಸಮುದಾಯದವರ ಜೊತೆ  ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸುತ್ತೇನೆ ಎಂದರು.

ಸಾಮಾನ್ಯ ಜನರೇ ನನಗೆ ಸ್ಟಾರ್ ಪ್ರಚಾರಕರು.  ಕ್ಷೇತ್ರದಲ್ಲಿ ಉತ್ತಮ ಬೆಂಬಲ ಸಿಗುತ್ತಿದೆ.  ಹಿಂದುತ್ವವಾದಿ ಈಶ್ವರಪ್ಪಗೆ ಬೆಂಬಲ ಎಂದು  ಜನರು ಹೇಳುತ್ತಿದ್ದಾರೆ. ಹೆಚ್ಚಿನ ಶಕ್ತಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಿಂದ ಬರುತ್ತದೆ. ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿ ವೀಕ್. ಹೀಗಾಗಿ ರಾಘವೇಂದ್ರ ಗೆಲ್ಲಲು ಬಿಡಲ್ಲ ಎಂದರು.

Key words: contest, shimoga, KS Eshwarappa