Monday, October 5, 2026

BDA Apartments

ಪ್ರಧಾನಿ ಮೋದಿ ಭೇಟಿಯಾಗಿ BDA JK_Adv BDA Adv
Home Front Page ಅವರ ದುರಂಹಕಾರ ಇಳಿಸಲು ಡಾ.ಸಿ.ಎನ್ ಮಂಜುನಾಥ್ ಕಣಕ್ಕಿಳಿಸಿದ್ದೇವೆ- ಡಿಕೆ ಬ್ರದರ್ಸ್ ವಿರುದ್ದ ಹೆಚ್.ಡಿಕೆ ವಾಗ್ದಾಳಿ.

ಅವರ ದುರಂಹಕಾರ ಇಳಿಸಲು ಡಾ.ಸಿ.ಎನ್ ಮಂಜುನಾಥ್ ಕಣಕ್ಕಿಳಿಸಿದ್ದೇವೆ- ಡಿಕೆ ಬ್ರದರ್ಸ್ ವಿರುದ್ದ ಹೆಚ್.ಡಿಕೆ ವಾಗ್ದಾಳಿ.

ಬೆಂಗಳೂರು,ಏಪ್ರಿಲ್,5,2024 (www.justkannada.in): ಅವರ ದುರಂಹಕಾರ ಇಳಿಸಲು ಡಾ.ಸಿಎನ್ ಮಂಜುನಾಥ್ ಅವರನ್ನ ಕಣಕ್ಕಿಳಿಸಿದ್ದೇವೆ.  ಬೆಂಗಳೂರು ಗ್ರಾಮಾಂತರದಲ್ಲಿ ಮಂಜುನಾಥ್ ಅವರು ಗೆಲ್ಲಬೇಕು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.

ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಯೋಗೇಶ್ವರ್ ಹೇಳಿದಂತೆ ಡಿಕೆ ನೋಟು ಡಾಕ್ಟರ್ ಗೆ ಓಟು. ನಾವು ವಿಶೇಷ ರಣತಂತ್ರ ಮಾಡುವ ಅವಶ್ಯಕತೆ ಇಲ್ಲ. ಡಾ. ಮಂಜುನಾಥ್ ಅವರ ಬಗ್ಗೆ ಯಾರಿಗೂ ಹೇಳುವ ಅವಶ್ಯಕತೆ ಇಲ್ಲ ಎಂದರು.

ಎರಡು ವರ್ಷದಲ್ಲಿ ಏನು ಕೆಲಸ ಮಾಡಿದ್ದಾರೆ ಎಂದು ಗೊತ್ತಿದೆ. ಕಾಸು ಕೊಟ್ಟು ಕಾಲಿಗೆ ಬೀಳುತ್ತಿದ್ದಾರೆ. ಮತಗಳು ಹೆಚ್ಚಿರುವ ಮನೆಗೆ ಹೋಗಿ ಗೋಗರಿಯುತ್ತಿದ್ದಾರೆ.  ಕೂಪನ್ ಕಾರ್ಡ್ ತಂದಿದ್ದಾರೆ ಎಂದು ಡಿಕೆ ಬ್ರದರ್ಸ್ ವಿರುದ್ದ ಹೆಚ್.ಡಿಕೆ  ವಾಗ್ದಾಳಿ ನಡೆಸಿದರು.

Key words: Dr. CN Manjunath, DKBrothers, HDK